ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದೊಡ್ಡ ವಾರ್ಡ್ ಗಳಲ್ಲಿ ನಂದಿನಿ ಲೇಔಟ್ ವಾರ್ಡ್ ಕೂಡ ಒಂದು. 50 ಸಾವಿರಕ್ಕೂ ಹೆಚ್ಚಿನ ಮತದಾರರಿರುವ ಈ ವಾರ್ಡ್ ರೌಂಡಪ್ ಇಲ್ಲಿದೆ....ನೋಡಿ.
ಅಂದಹಾಗೆ ಸಿಎಂ ಬೊಮ್ಮಾಯಿ ಯವರು ಬೆಂಗಳೂರು ಅಭಿವೃದ್ಧಿ ಕುರಿತು ಪೋಟೊ ಪ್ರಮೋಷನ್ ಈ ಸ್ಥಳದಲ್ಲಿ ಮಾಡಲಿ ಎಂಬ ಮಹಿಳೆಯ ಆಕ್ರೋಶದಿಂದ ತಿಳಿಯುತ್ತೆ ವಾರ್ಡ್ ಬಗೆಗಿನ ಆಡಳಿತ ಪಕ್ಷಕ್ಕೆ ಇರುವ ಕಾಳಜಿ.
ಹೌದು.. ನಗರದ ಕಂಠೀರವ ಸ್ಟುಡಿಯೋ ಇರುವಂತಹ ಈ ವಾರ್ಡ್ ನಂದಿನಿ ಬಡಾವಣೆ. ಬಿಡಿಎದಿಂದ ಲೇಔಟ್ ನಿರ್ಮಾಣವಾದ ಬಳಿಕ ಜನಸಂಖ್ಯೆ ಆಧಾರದ ಮೇಲೆ ಬಿಬಿಎಂಪಿ ವಾರ್ಡ್ ನಿರ್ಮಾಣ ಮಾಡಲಾಗಿದೆ. ತದನಂತರವೇ ಅಭಿವೃದ್ಧಿ ಗೆ ಹೆಚ್ಚಿನ ಒತ್ತನ್ನು ಜನಪ್ರತಿನಿಧಿಗಳು ನೀಡಿದ್ರು ಕೂಡ ಮೂಲಭೂತವಾಗಿ ಸರ್ಕಾರದ ಯೋಜನೆಗಳೇ ಜನರಿಗೆ ಮಾರಕವಾಗಿದೆ!
ಇದೇ ವೇಳೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ನಂದಿನಿ ಬಡಾವಣೆ ವಾರ್ಡ್ ನಲ್ಲಿ 56 ಸಾವಿರ ಮತದಾರರಿದ್ದಾರೆ. ದೊಡ್ಡ ವಾರ್ಡ್ ಆಗಿರುವ ಹಿನ್ನೆಲೆ ಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬೇಕಾಗುತ್ತೆ. ಈ ನಡುವೆ 40 ಕೋಟಿಯಷ್ಟು ಅನುದಾನವನ್ನು 5 ವರ್ಷದಲ್ಲಿ ಮಾಜಿ ಕಾರ್ಪೊರೇಟರ್ ಕೆ.ವಿ.ರಾಜೇಂದ್ರ ಕುಮಾರ್ ತಂದಿದ್ದಾರೆ. ಹೈಟೆಕ್ ಸಮುದಾಯ ಭವನ, ಬಿಬಿಎಂಪಿ ಆಸ್ಪತ್ರೆ, ನಂದಿನಿ ಬಡಾವಣೆ ಸ್ಟೇಡಿಯಂ, ಅಂತಾರಾಷ್ಟ್ರೀಯ ಈಜುಕೊಳ, ಡಾ.ರಾಜ್ ಕುಮಾರ್ ಆಸ್ಪತ್ರೆ, ವಿವೇಕಾನಂದ ಜ್ಞಾನ ಮಂದಿರ, ಡಾ.ಅಂಬೇಡ್ಕರ್ ಉದ್ಯಾನವನ ಸೇರಿದಂತೆ ಸರ್ಕಾರ ನೀಡಿದ ಅನುದಾನವನ್ನು ಹೆಚ್ಚಿನದಾಗಿ ಕಟ್ಟಡಗಳ ನಿರ್ಮಾಣಕ್ಕೆ ವಿನಿಯೋಗಿಸಲಾಗಿದೆ.
ಇನ್ನು, ಅತಿಹೆಚ್ಚು ಪಾರ್ಕ್ ಹೊಂದಿರುವ ಈ ವಾರ್ಡ್ ವಿವೇಕಾನಂದ ಉದ್ಯಾನವನ, ಕೆಂಪೇಗೌಡ ಪಾರ್ಕ್ ಸಹಿತ 17 ಪಾರ್ಕ್ ಹೊಂದಿದೆ! ಆದರೆ, ಇಲ್ಲಿಯೂ ಸರ್ಕಾರಿ ಶಾಲೆ ಇಲ್ಲ. ಸಹಜವಾಗಿ ಈ ಬೇಡಿಕೆ ಸಾಕಷ್ಟು ಇದೆ. ಅದರಲ್ಲೂ ಮುಖ್ಯವಾಗಿ ವಾರ್ಡ್ ನಲ್ಲಿ ಹೆಚ್ಚಿದ ಜನಸಂಖ್ಯೆಯಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಪಾಲಿಕೆ ಸಮಾನವಾದ ಹಂಚಿಕೆಯಿಂದ ದೂರದೃಷ್ಟಿ ಉಳ್ಳ ಯೋಜನೆ ಜಾರಿಗೆ ಅನುದಾನ ಕೊರತೆ ಉಂಟಾಗುತ್ತಿದೆ.
ಕ್ಯಾಮೆರಾಮನ್ ಅಜ್ಹರ್ ಜತೆ ಗಣೇಶ್ ಹೆಗಡೆ, 'ಪಬ್ಲಿಕ್ ನೆಕ್ಸ್ಟ್' ಬೆಂಗಳೂರು
PublicNext
24/03/2022 08:21 pm