ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಗರ ಪ್ರದಕ್ಷಿಣೆ ಎರಡನೇ ದಿನವೂ ಮುಂದುವರಿದಿತ್ತು. ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದರು. ಇದರ ಮಧ್ಯೆ ಸಿಎಂ ಹಾಗೂ ಸಚಿವ ಅಶೋಕ್, ಸಂಸದ ತೇಜಸ್ವಿಸೂರ್ಯ, ಶಾಸಕ ಉದಯ್ ಗರುಡಾಚಾರ್ ಗಾಂಧಿ ಬಜಾರ್ ವಿಧ್ಯಾರ್ಥಿ ಭವನಕ್ಕೆ ಭೇಟಿ ನೀಡಿದರು. ಅಲ್ಲಿ ಕೇಸರಿ ಬಾತ್, ದೋಸೆ ತಿಂದರು. ಆ ಸಂದರ್ಭದಲ್ಲಿ ಆಮ್ ಅದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಬಾಸ್ಕರ್ ರಾವ್ ಕೂಡಾ ಸಿಎಂ ಜತೆಯಲ್ಲಿದ್ದರು. ಈ ವೇಳೆ ಕೆಲ ಸಮಯ ಉಭಯ ನಾಯಕರು ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿದೆ.
Kshetra Samachara
15/06/2022 05:32 pm