ಹಲಸೂರು: ಗಣೇಶ ವಿಸರ್ಜನೆಗಾಗಿ ನಗರದಲ್ಲಿ ಈಗಾಗಲೇ ಬಿಬಿಎಂಪಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಗಣೇಶ ವಿಸರ್ಜನೆಗೆಂದು ಸಿಬ್ಬಂದಿಗಳು ನಗರದ ಕಲ್ಯಾಣಿಗಳನ್ನು ಸ್ವಚ್ಛತೆಗೊಳಿಸಿದ್ದಾರೆ.
ಕಲ್ಯಾಣಿಯ ಸುತ್ತಲೂ ಇರುವ ಕಂಬಿಗಳಿಗೆ ಸಿಬ್ಬಂದಿಗಳು ಬಣ್ಣ ಹಚ್ಚುತ್ತಿದ್ದಾರೆ. ಸುತ್ತಲೂ ವಿದ್ಯುತ್ ದೀಪಗಳು ಅದರಲ್ಲೂ ಪ್ರಮುಖವಾಗಿ ಸಿಸಿ ಕ್ಯಾಮರಾಗಳನ್ನ ಕೂಡ ಅಳವಡಿಕೆ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು, ಗಲಭೆಗಳು ನಡೆಯದಂತೆ ಎಚ್ಚರಿಕೆವಹಿಸಲಾಗಿದೆ. ಈಗಾಗಲೇ ಸುಮಾರು ೩೦ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಗಳನ್ನ ಕೂಡ ನಗರದಲ್ಲಿ ನಿಯೋಜನೆ ಮಾಡಲಾಗಿದೆ.
ಇನ್ನು ನಗರದಲ್ಲಿರುವ ಹಲಸೂರು, ಯಡಿಯೂರು, ಸ್ಯಾಂಕಿಟ್ಯಾಂಕಿ, ಯಲಹಂಕ, ಹಾಗೂ ನಗರದ ಹಲವು ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಎಲ್ಲಾ ರೀತಿ ತಯಾರಿ ಮಾಡಿಕೊಳ್ಳಲಾಗಿದೆ. ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ನೀರು ಕೂಡ ತುಂಬಿಸಲಾಗುತ್ತಿದೆ. ಒಟ್ನಲಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
PublicNext
28/08/2022 04:59 pm