ಆನೇಕಲ್:ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ ವರ್ತಕರು ಮತ್ತು ಸಾರ್ವಜನಿಕರ ಕರಿಸಿ ಅವರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದೆ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕಾಗಿದೆ ಪ್ಲಾಸ್ಟಿಕ್ ಉತ್ಪನ್ನ ಮಾಡುತ್ತಿರುವ ಕಂಪನಿಗಳನ್ನು ಮೊದಲು ಕಡಿವಾಣ ಹಾಕಬೇಕಿದೆ ಸಾರ್ವಜನಿಕರು ಕೂಡ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಒಂದು ನಿರ್ಧಾರ ಮಾಡಬೇಕಿತ್ತು ಆದರೆ ಮಾಡಲಿಲ್ಲ ನಾನು ಕೂಡ ಸರ್ಕಾರಕ್ಕೆ ಗಮನಹರಿಸುವ ರೀತಿಯಲ್ಲಿ ಪತ್ರವನ್ನು ಬರೆಯುತ್ತೇನೆ ಅಂತ ತಿಳಿಸಿದರು
Kshetra Samachara
25/07/2022 07:22 pm