ಅನೇಕಲ್: ಇತ್ತೀಚಿಗೆ ಒತ್ತಡದ ಬದುಕು ಹಾಗೂ ಜೀವನದ ಜಂಜಾಟ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಭಾಗ್ಯ ಎಂದು ಸಲಹೆಯನ್ನು ಶಾಸಕ ಶಿವಣ್ಣ ನೀಡಿದರು.
ಆನೇಕಲ್ ತಾಲ್ಲೂಕಿನ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂಡಸಂದ್ರ ಗ್ರಾಮದ ಮುನಿಯಲ್ಲಪ್ಪರವರ ಬಿಲ್ಡಿಂಗ್ ಆವರಣದಲ್ಲಿ ಶಾಂತಿಪುರ ಗ್ರಾಮ ಪಂಚಾಯಿತಿ ಮತ್ತು ವೈದೇಹಿ ಆಸ್ಪತ್ತೆ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಇನ್ನು ಈ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಬಿ ಶಿವಣ್ಣನವರು ಚಾಲನೆ ನೀಡಿದರು.
ಇನ್ನು ಕಾರ್ಯಕ್ರಮದ ನೇತೃತ್ವವನ್ನು ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಮಲಾ ರಘುನಾಥ್ ಮತ್ತು ಉಪಾಧ್ಯಕ್ಷ ಮದನ್ ರವರು ವಹಿಸಿದ್ದು ನುರಿತ ವೈದ್ಯರಿಂದ ಎಲ್ಲಾ ತರಹದ ತಪಾಸಣೆ ಮಾಡಲಾಯಿತು ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಾರಿಜಾತ ದೊರೆಸ್ವಾಮಿ. ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಗ್ರಾಮಸ್ಥರು ಮುಖಂಡರು ಭಾಗಿಯಾಗಿದ್ದರು
Kshetra Samachara
09/07/2022 06:31 pm