ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ; ಮಹದೇವಪುರದಲ್ಲಿ ಪಶುವೈದ್ಯ ಚಿಕಿತ್ಸಾಲಯ ಆರಂಭ

ಬೆಂಗಳೂರು ; ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡಿನಲ್ಲಿ ನೂತನ ಪಶುವೈದ್ಯ ಚಿಕಿತ್ಸಾಲಯಕ್ಕೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಹಾಗೂ ಸಂಸದ ಪಿ.ಸಿ.ಮೋಹನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ , ಮುಂದಿನ ದಿನಗಳಲ್ಲಿ ಪ್ರತಿಯೊಂದೂ ಮನೆಯಲ್ಲೂ ಹಸುಗಳನ್ನು ಸಾಕುವಂತ ಅನಿವಾರ್ಯ ನಿರ್ಮಾಣವಾಗಲಿದೆ, ಹಸುಗಳು ದೈವ ಸ್ವರೂಪವೆಂದು ದೇಶಕ್ಕೆ ತಿಳಿದಿದೆ, ಹಸುಗಳನ್ನು ಮನೆಯಲ್ಲಿ ಸಾಕುವುದರಿಂದ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣವಾಗಲಿದ್ದು, ಒಂದು ಕುಟುಂಬ ನಿರ್ವಹಣೆಗೆ ಹಸುಗಳು ಸಾಕಬೇಕು ಎಂದರು.

ನಂದೀಶ್ ರೆಡ್ಡಿರವರ ಕೋಟೆ ಕುಟುಂಬಸ್ಥರಿಂದ ಚಿಕಿತ್ಸಾಲಯಕ್ಕೆ ಭೂಮಿಯನ್ನು ದಾನ ನೀಡಿರುವುದಕ್ಕೆ ಅವರಿಗೆ ಕ್ಷೇತ್ರದ ಜನರಪರವಾಗಿ ಅಭಿನಂದೆಯನ್ನು ಸಲ್ಲಿಸಿದರು.ಪಶುಗಳ ಮೇಲೆ ಪ್ರೀತಿ ಮನೋಭಾವ ಬೆಳಸಿಕೊಳ್ಳಿ, ಪ್ರಸ್ತುತ ಜನರು ಹೆಚ್ಚಾಗಿ ಹಸು, ಬೆಕ್ಕು, ನಾಯಿ, ಪಕ್ಷಿಗಳನ್ನು ಸಾಕುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಯಾವುದೇ ಸಮಸ್ಯೆ ಬರದಂತೆ ಚಿಕಿತ್ಸಾಲಯ ಕಾರ್ಯನಿರ್ವಹಿಸಲಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಉಮಾಪತಿ, ವೈದ್ಯಾಧಿಕಾರಿ ಲಕ್ಷ್ಮಿ, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

21/02/2022 10:19 pm

Cinque Terre

3.12 K

Cinque Terre

0

ಸಂಬಂಧಿತ ಸುದ್ದಿ