ಯಲಹಂಕ: ಮೂರು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಯಲಹಂಕದ ಅಟ್ಟೂರು ವಾರ್ಡ್ ಬೆಟ್ಟಹಳ್ಳಿಯ ಪ್ರಾ. ಆ. ಕೇಂದ್ರವನ್ನು ಇಂದು ತೆರೆಯಲಾಯಿತು. ಕೊರೊನಾ ಆತಂಕ, ಜನರಿಲ್ಲದೆ- ಕೆಲಸವಿಲ್ಲದ ಕಾರಣ ಈ ಆರೋಗ್ಯ ಕೇಂದ್ರವನ್ನು ಮುಚ್ಚಲಾಗಿತ್ತು. ದೊಡ್ಡಬೆಟ್ಟಹಳ್ಳಿ & ಚಿಕ್ಕಬೆಟ್ಟಹಳ್ಳಿ ಸುತ್ತಮುತ್ತಲ 16000ಕ್ಕೂ ಹೆಚ್ಚು ಜನರಿಗೆ ಈ ಆರೋಗ್ಯ ಕೇಂದ್ರದಿಂದ ಅನುಕೂಲ ಆಗ್ತಿತ್ತು.
ಆಗ ಇದನ್ನು ಕೋವಿಡ್ ಕೇರ್ ಸೆಂಟರ್ ರೀತಿ/ ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಬಿಬಿಎಂಪಿ ತೀರ್ಮಾನಿಸಿತ್ತು. ಆದರೆ, ದೊಡ್ಡಬೆಟ್ಟಹಳ್ಳಿ ಜನ ಪ್ರಾ. ಆರೋಗ್ಯ ಕೇಂದ್ರವನ್ನಾಗಿಸಿ ಎಂದು ಒತ್ತಾಯಿಸಿದ್ದರು.
ಇದೀಗ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರೂ ಪ್ರಾ. ಆರೋಗ್ಯ ಕೇಂದ್ರವನ್ನು ನಮಗೆ ಬಿಟ್ಟು ಕೊಡಿ ಎಂದು ಪ್ರತಿಭಟನೆ ನಡೆಸಿದರು.
ಧರಣಿ ಮತ್ತು ಜನರ ಹೋರಾಟದ ಹಿನ್ನೆಲೆ ಯಲಹಂಕ ಬಿಬಿಎಂಪಿ ವಲಯ ಜಂಟಿ ಆಯುಕ್ತೆ ಡಾ.ಪೂರ್ಣಿಮಾ ಮತ್ತು ಯಲಹಂಕ ಉಪನಗರ ಪೊಲೀಸರು ಸ್ಥಳಕ್ಕೆ ಬಂದು ಹೋರಾಟಗಾರರ ಅಹವಾಲು ಆಲಿಸಿದರು. ಪ್ರತಿಭಟನಾಕಾರರಿಗೆ ಸಮಾಧಾನ ಪಡಿಸಿದ ನಂತರ ಬಿಬಿಎಂಪಿ ಆಯುಕ್ತರು, ಪ್ರಾ. ಆ. ಕೇಂದ್ರದ ಬೀಗ ತೆರೆದರು. ಕೇಂದ್ರವನ್ನು ಆಧುನೀಕರಣಗೊಳಿಸಿ ಶೀಘ್ರ ಜನ ಸೇವೆಗೆ ತೆರೆಯೋದಾಗಿ ತಿಳಿಸಿದರು.
Kshetra Samachara
09/02/2022 09:39 pm