ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲಾಕ್ ಡೌನ್ ಮಾಡುವ ಪ್ರಸಂಗ ಬಂದಿಲ್ಲ, ನಿಯಮ ಪಾಲನೆ ತಪ್ಪಿಸುವಂತಿಲ್ಲ - ಆರ್ ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಬಿದ್ದ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ.ಈಗಾಗಲೇ ರಾಜ್ಯ ಸರ್ಕಾರ ಬೆಳೆ ಪರಿಹಾರ ಕೊಡುವ ಕೆಲಸ ಮಾಡುತ್ತಿದೆ.ಎಲ್ಲಾ ಡಿಸಿಗಳಿಗೆ ಗಡುವು ನೀಡಲಾಗಿದೆ. ರೈತರ ಬೆಳೆ ಹಾನಿ ಗುರುತು ಮಾಡಬೇಕು.ಹಿಂದೆ ನೀಡಿದ ಪರಿಹಾರ ತಿಂಗಳು, ಮೂರು ತಿಂಗಳು ಅಂತ ಕೊಡಲಾಗುತ್ತಿತ್ತು. ಈಗ ಬೆಳೆ ಹಾನಿ ವರದಿ ಬಂದ ಕೂಡಲೇ ಕೊಡಲು ಸೂಚನೆ ನೀಡಿದ್ದೇನೆ ಎಂದು ಸಚಿವ ಆರ್ ಅಶೋಕ್ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.

ಈವರೆಗೂ 3ಲಕ್ಷ ರೈತರಿಗೆ 276.57 ಕೋಟಿ ಪರಿಹಾರ ನೇರವಾಗಿ ಪಾವತಿ ಮಾಡಲಾಗಿದೆ.1.61 ಲಕ್ಷ ರೈತರಿಗೆ ಸಬ್ಸಿಡಿ ಸೇರಿಸಿ ಇಂದು ರೈತರ ಅಕೌಂಟಿಗೆ ಬಿಡುಗಡೆ ಮಾಡಲು ಅನುಮೋದನೆ ಪಡೆಯಲಾಗುತ್ತದೆ. ಒಟ್ಟು 4.61 ಲಕ್ಷ ರೈತರುಗೆ 318.87 ಕೋಟಿ ಹಣವನ್ನ ರೈತರ ಖಾತೆಗೆ ಬಿಡುಗಡೆ ಮಾಡಿದಂತಾಗಲಿದೆ ಎಂದರು.

ಇದೇ ಮೊದಲಬಾರಿಗೆ ವರದಿ ಬಂದ ಬಳಿಕ ಹಣ ಸಂದಾಯ ಮಾಡಲಾಗಿದೆ. ಕೇಂದ್ರಕ್ಕೂ ಕೂಡ ವರದಿ ನೀಡಲಾಗುವುದು.

NDRF ರೂಲ್ಸ್ ಅಡಿಯಲ್ಲಿ ಕೆಂದ್ರಕ್ಕೆ ಮತ್ತೆ ವರದಿ ಕೊಡಲಾಗುವುದು. ಒಟ್ಟಾರೆ ನಷ್ಟ, ರೋಡ್, ಎಲೆಕ್ಟ್ರಿಕ್ ಪೋಲ್ ಸೇರಿದಂತೆ ಹಲವು ಹಾನಿ ಬಗ್ಗೆ ಅಂದಾಜು ಮಾಡಲಾಗ್ತಿದೆ.ಜಿಲ್ಲಾಧಿಕಾರಿಗಳು PD ಅಕೌಂಟ್ ಮೂಲಕ ಹಣ ನೀಡುವಂತೆ ಸೂಚನೆ ನೀಡಲಾಗಿದೆಂದರು.

ಇನ್ನೂ ಒಮಿಕ್ರಾನ್ ವೈರಸ್ ಬಗ್ಗೆ ಸಿ.ಎಂ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಮೈಸೂರು, ಚಾಮರಾಜನಗರ, ಗಡಿಗಳಲ್ಲಿ ಸ್ಟ್ರಿಕ್ಟ್ ಮಾಡಲಾಗಿದೆ.ಸೌತ್ ಆಫ್ರಿಕಾ ಸೇರಿದಂತೆ ಹಲವೆಡೆ ಈ ವೈರಸ್ ಕಾಣಿಸಿಕೊಂಡಿದೆ. ದೇಶಾದ್ಯಂತ ಹರಡಿಕೊಂಡಿದೆ. ವಿದೇಶದಿಂದ ಬರುವವರ ಮೇಲೆ ಕಣ್ಣಿಡಲಾಗಿದೆ.ಸ್ವತಃ ಜಿಲ್ಲಾಧಿಕಾರಿ ಗಳು ಗಡಿಯಲ್ಲಿ ಕಾಯುವಂತೆ ಸೂಚನೆ ನೀಡಿದ್ದೇವೆ . ಕೇರಳದಿಂದ ಬರುವ ನರ್ಸ್ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲಾಗಿದೆ ಎಂದರು.

ಲಾಕ್ ಡೌನ್ ಮಾಡುವ ಪ್ರಸಂಗ ಬಂದಿಲ್ಲ. ಕಂದಾಯ ಇಲಾಖೆ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಇಂದ ಹಣ ಬಿಡುಗಡೆ ಮಾಡಲಾಗುವುದು.

ಕೊರೋನಾ ಉಲ್ಬಣಿಸಿದ್ರೆ, ಹಿಂದೆ ಆದಂತ ಎಲ್ಲಾ ಕ್ರಮ ಕೈಗೊಳ್ಳಲಿದ್ದೇವೆ. ಮಾಸ್ಕ್ ಬಳಸೋದು ಕಡ್ಡಾಯವಾಗಿ ಮುಂದುವರೆಯಲಿದೆ. ರಾಜಕೀಯ ಸಮಾರಂಭ, ಮದುವೆ ಎಲ್ಲದಕ್ಕೂ ನಿಯಮ ಎಲ್ಲರಿಗೂ ಅನ್ವಯವಾಗಲಿದೆ ನಿಯಮ ಪಾಲನೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜನತಾದಳ ಎಲ್ಲದಕ್ಕೂ ಅನ್ವಯವಾಗುತ್ತೆ ಎಂದರು.

ಮುರುಗೇಶ್ ನಿರಾಣಿ ಸಿಎಂ ಆಗಲಿದ್ದಾರೆ ಅಂತ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಇವರು, ಯಾರೂ ತಿರುಕನ ಕನಸು ಕಾಣೋದು ಬೇಡ. ನಮ್ಮ ಕೇಂದ್ರದ ನಾಯಕರಾದ ಮೋದಿ, ಅಮಿತ್ ಶಾ ಅವರು ತೀರ್ಮಾನದಂತೆ ಸಿಎಂ‌ ಆಗಿ ಬೊಮ್ಮಾಯಿ ಆಯ್ಕೆಯಾಗಿದ್ದಾರೆ ಇದನ್ನ ನಮ್ಮ ವರಿಷ್ಠರೇ ಸ್ಪಷ್ಟವಾಗಿ ಹೇಳಿದ್ದಾರೆಂದು ನುಡಿದರು.

ಜನ ಸಂಕಷ್ಟ ಸಂದರ್ಭದಲ್ಲಿ ಜನರ ಧ್ವನಿಯಾಗಿ ಸ್ಪಂದನೆ ಮಾಡಬೇಕು. ಬೊಮ್ಮಾಯಿಗೆ ಕಾಮನ್ ಸಿಎಂ ಅಂತ ಹೆಸರಿದೆ.ಈಗ ಬಂದಿರೋ ಎಲ್ಲಾ ಸಂಕಷ್ಟಗಳನ್ನ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ.ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು.ಈಶ್ವರಪ್ಪ ತಮಾಷೆಯಾಗಿ ಹೇಳಿದ್ದಾರೆಂದರು.

ಅಶೋಕ್ ಸಿಎಂ ಆಗಲ್ವಾ ಎಂದು ಕೇಳಿದಾಗ, ರಾಜ್ಯದ ಚುಕ್ಕಾಣಿ ಯಾರು ಹಿಡಿಬೇಕು ಅಂತ ಜನ ತೀರ್ಮಾನ ಮಾಡ್ತಾರೆ.ನಾಯಕರು, ಹಣೆ ಬರಹ ತೀರ್ಮಾನ ಆಗಲಿದೆ.ಈಗ ಬೊಮ್ಮಾಯಿ ಅವರಿಗೆ ಒಲಿದು ಬಂದಿದೆ.ಬಿಸಿಲಿನ ಕುದುರೆ ಮೇಲೆ ಹೋಗಬಾರದು ಎಂದು ಅಶೋಕ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

Edited By : Manjunath H D
Kshetra Samachara

Kshetra Samachara

30/11/2021 01:16 pm

Cinque Terre

410

Cinque Terre

0

ಸಂಬಂಧಿತ ಸುದ್ದಿ