ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಿಪರ್ಯಾಸ ಎಂದರೆ ಸಚಿವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಬೆಂಗಳೂರು ನಗರ ಜಿಲ್ಲಾ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ ಕ್ವಾರಂಟೈನ್ ಆಗುವ ಬದಲು ಇಂದು ಅಟಲ್ ಜೀ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ಯಕರ್ತರಲ್ಲಿ ಆತಂಕ ಹೆಚ್ಚಿಸಿದೆ.
ಡಿ.25 ಅಟಲ್ ಜೀ ಜನ್ಮದಿನದ ಅಂಗವಾಗಿ ಇಂದು ಚಿಕ್ಕಬಾಣಾವಾರ ಪುರಸಭೆ ಮಹಾಶಕ್ತಿ ಕೇಂದ್ರದಿಂದ ಚಿಕ್ಕಬಾಣಾವರದಲ್ಲಿ ಅಟಲ್ ಜೀ ಅವರಿಗೆ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತ ರಿಂದಲೇ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ.
ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವಂತೂ ಇಲ್ವೇ ಇಲ್ಲಾ. ಇನ್ನು ಮುಖ್ಯವಾದ ಸಂಗತಿ ಎಂದರೆ ಪುರಸಭೆ ಅಧಿಕಾರಿಗಳಿಂದ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಪಡೆಯದ ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಈ ವೇಳೆ ಹೆಣ್ಣು ಮಕ್ಕಳಿಂದ ನೂಕು ನುಗ್ಗಲು ನಡೆಯಿತು.
ಇದನ್ನೆಲ್ಲ ಗಮನಿಸಿದ ಜನ ಸರ್ಕಾರದ ಕೊರೊನಾ ಟಫ್ ರೂಲ್ಸ್ ಬರೀ ಜನಸಾಮಾನ್ಯರಿಗೆ ಸೀಮಿತಾನಾ ಇದು ರಾಜಕೀಯ ಪಕ್ಷದ ನಾಯಕರಿಗೆ ಅನ್ವಯಿಸುವುದಿಲ್ವಾ ಎಂದು ಕಿಡಿ ಕಾರಿದ್ದಾರೆ.
PublicNext
02/01/2022 03:37 pm