ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನತಾ ಜಲಧಾರೆ ಸಮಾರೋಪಕ್ಕೂ ಮುನ್ನ ಶಕ್ತಿದೇವತೆ ಮತ್ತು ಹೆತ್ತವರ ಆಶೀರ್ವಾದಕ್ಕೆ ಮುಂದಾದ H.D.K.

ರಾಮನಗರ: 2023ರ ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಮೂರು ಪಕ್ಷಗಳು ಈಗಿನಿಂದಲೇ ರಾಜ್ಯದ ಜನರನ್ನ ಸೆಳೆಯಲು ಚುನಾವಣಾ ಕಣಕ್ಕೆ ಇಳಿದಿವೆ. ಅದರಲ್ಲೂ ದೇವೇಗೌಡರ ಕುಡಿ ಕುಮಾರಸ್ವಾಮಿ ತಿಂಗಳ ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಸಮಾರೋಪ ಸಮಾರಂಭಕ್ಕೂ ಮುನ್ನ ರಾಮನಗರದ ಶಕ್ತಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಜಲಧಾರೆ ಕಾರ್ಯಕ್ರಮ ಆರಂಭದಿಂದಲು ಈವರೆಗೂ ವರುಣ ಸಿಂಚನದ ಮೂಲಕ ಶುಭವನ್ನೇ ಕಂಡಿದೆ ಎಂದರು.

ನೆಲಮಂಗಲದಲ್ಲಿ ನಡೆಯುವ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಲೆಂದು ದೇವರು ಮತ್ತು ಹೆತ್ತವರ ಆಶೀರ್ವಾದ ಪಡೆಯಲಾಗಿದೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಹಾಗು ನನ್ನ ಕರ್ಮಭೂಮಿ ರಾಮನಗರದಲ್ಲು ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ.

ತಾಯಿ ಅನುಗ್ರಹದಿಂದ ನೆಲಮಂಗಲದ ಸಮಾವೇಶ ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಲಾಗಿದೆ. ಎಲ್ಲರಿಗೂ ಸಮಾರೋಪ ಸಮಾರಂಭ ನಡೆಯುತ್ತದೆಯೇ ಎಂಬ ಆತಂಕವಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಬರ್ತಿದೆ. ಇನ್ನೂ ಎರಡ್ಮೂರು ದಿನವೂ ಮಳೆ ಬರಲಿದೆ. ಮಳೆ ಬರಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಆದರೆ ನನಗೆ ವಿಶ್ವಾಸ ಇದೆ. ಚಾಮುಂಡೇಶ್ವರಿ ತಾಯಿ ಅನುಗ್ರಹದಿಂದ ನೆಲಮಂಗಲದ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ‌ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯದ ಸಮಗ್ರ ನೀರಾವರಿ ಯೋಜನೆಗೆ ಜನತಾ ಜಲಧಾರೆ ಕಾರ್ಯಕ್ರಮ ನೆರವಾಗಲಿದೆ ಎಂದು ಹೆಚ್.ಡಿ.ಕೆ ಸ್ಪಷ್ಟಪಡಿಸಿದರು..

2023ರ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಜನರ ಮುಂದೆ ತೆರಳುತ್ತಿವೆ..

Edited By : Somashekar
Kshetra Samachara

Kshetra Samachara

13/05/2022 08:09 pm

Cinque Terre

4.01 K

Cinque Terre

0

ಸಂಬಂಧಿತ ಸುದ್ದಿ