ದೊಡ್ಡಬಳ್ಳಾಪುರ: ಕಂದಾಯ ಸಚಿವ ಆರ್.ಅಶೋಕ್ ತಾಯಿ ತವರೂರು ತಾಲೂಕಿನ ಚನ್ನಾದೇವಿ ಅಗ್ರಹಾರ, ಗ್ರಾಮದ ಗೋಮಾಳ ಜಾಗವನ್ನ ಎಜುಕೇಷನ್ ಟ್ರಸ್ಟ್ ಗೆ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು ಪಾದಯಾತ್ರೆ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.
ತಾಲೂಕಿನ ಚೆನ್ನಾದೇವಿ ಅಗ್ರಹಾರ ಗ್ರಾಮದ ಸರ್ವೆ ನಂಬರ್ 23 ಮತ್ತು 24 ರಲ್ಲಿನ 33 ಎಕರೆ ಸರ್ಕಾರಿ ಗೋಮಾಳವಿದೆ. ಇದರಲ್ಲಿ ಐದು ಎಕರೆ ಭೂಮಿಯನ್ನು ಹೆಣ್ಣೂರಿನ ಎಚ್ಎಂಆರ್ ಚಿಕ್ಕಗುಳ್ಳಪ್ಪ ಎಜುಕೇಶನ್ ಟ್ರಸ್ಟ್ ಗೆ ಪರಾಭಾರೆ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರಕ್ಕೆ ಗ್ರಾಮಸ್ಥರ ವಿರುದ್ಧ ಇದ್ದು, ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಮ್ಮೂರಿನ ಗೋಮಾಳ ಜಾಗವನ್ನ ಖಾಸಗಿಯವರಿಗೆ ನೀಡುವುದಿಲ್ಲವೆಂದು ಹೇಳಿದರು.
ಫ್ಲೋ..
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ನಮ್ಮ ಪೂರ್ವಿಕರು ನೂರಾರು ವರ್ಷದಿಂದ ಉಳಿಸಿಕೊಂಡು ಬಂದಿರುವ ಗೋಮಾಳವನ್ನ ಗ್ರಾಮಸ್ಥರಿಗೆ ತಿಳಿಯದಂತೆ ಪರಾಭಾರೆಗೆ ಮುಂದಾಗಿದೆ ಸರ್ಕಾರ,ಬಲವಂತವಾಗಿ ಪರಾಭಾರೆಗೆ ಮುಂದಾದರೆ ಅಧಿಕಾರಿಗಳಿಗೆ ಘೇರಾವ್ ಹಾಕುವುದಲ್ಲದೆ ಪ್ರತಿಭಟನೆ, ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೈಟ್ : ಸಿ.ಡಿ. ಸತ್ಯನಾರಾಯಣಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಂಜೇಗೌಡ ಮಾತನಾಡಿ, ಚೆನ್ನಾದೇವಿ ಅಗ್ರಹಾರ ಹಾಗೂ ಕೋಡಿಪಾಳ್ಯದಲ್ಲಿ ಒಟ್ಟು 220 ಮನೆಗಳಿವೆ. ಇವರಲ್ಲಿ 200 ಕುಟುಂಬಗಳು ಜಾನುವಾರು ಸಾಕಣೆ ಮಾಡುತ್ತಿವೆ. 2000 ಕುರಿಗಳು, 150 ಮೇಕೆಗಳಿವೆ. ಗೋಮಾಳ ಪರಾಭಾರೆ ಮಾಡಿದರೆ ಹೈನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಬೀದಿಗೆ ಬೀಳಲಿವೆ. ಹಾಗಾಗಿ ಯಾವುದೇ ಕಾರಣಕ್ಕೂ ಗೋಮಾಳ ಭೂಮಿ ಖಾಸಗಿಯವರಿಗೆ ನೀಡಬಾರದು ಎಂದು ಮನವಿ ಮಾಡಿದರು.
ಬೈಟ್ : ನಂಜೇಗೌಡ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ.
ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನ ಖಾಸಗಿಯವರಿಗೆ ಮಂಜೂರು ಮಾಡಲು ಸಾಧ್ಯವಿಲ್ಲ. ಮತ್ತು ಪ್ರತಿ ಗ್ರಾಮದಲ್ಲೂ 30 ಎಕರೆ ಗೋಮಾಳ ಜಾಗ ಇರಲೇ ಬೇಕೆಂಬ ಕಾನೂನಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದೆ ಸರ್ಕಾರ ಎಜುಕೇಷನ್ ಟ್ರಸ್ಟ್ ಗೆ ಭೂಮಿ ಮಂಜೂರು ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Kshetra Samachara
06/05/2022 02:09 pm