ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹೆಚ್.ಎಸ್. ಆರ್ ಬಡಾವಣೆಯಲ್ಲಿರುವ ವೈಟ್ ಹೌಸ್ ಕನ್ವೆನ್ಷನ್ ಹಾಲ್ ನಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಶಾಸಕ ಸತೀಶ್ ರೆಡ್ಡಿ ಭಾಗವಹಿಸಿದ್ದರು.
ಇನ್ನು ನರೇಂದ್ರ ಮೋದಿ ಸರ್ಕಾರವು ಇಂಧನದ ಬೆಲೆಯನ್ನು ಕಡಿತಗೊಳಿಸಿದ ಕುರಿತು ವಿವರಿಸಲಾಯಿತು ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯ ಸಂಘಟನಾತ್ಮಕ ವಿಷಯಗಳ ಕುರಿತು ತಿಳಿಸಲಾಯಿತು. ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರುಗಳು, ಬಿಜೆಪಿ ಮುಖಂಡರು, ಮೋರ್ಚಾಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
22/05/2022 07:21 pm