ಬೆಂಗಳೂರು: ಮಹಾರಾಣಿ ಕ್ಲಸ್ಟರ್ ಕಾಲೇಜಿನ ವಿದ್ಯಾರ್ಥಿನಿಯರಿಂದ ಪರೀಕ್ಷೆ ಫೀಸ್ ಹೆಚ್ಚಳ ಮಾಡಿದ್ದಾರೆ ಎಂದು ಧಿಡೀರ್ ಪ್ರತಿಭಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ನಾವು ಹೆಚ್ಚು ಫೀಸ್ ಕಟ್ಟಲು ರೆಡಿ ಇಲ್ಲ ಎನ್ನುವ ವಿಚಾರವಾಗಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ನಡುವೆ ವಾಗ್ವಾದ ನೆಡೆದಿದೆ. ಸರ್ಕಾರಿ ಕಾಲೇಜಿಗೆ ಸೇರಿವ ಮಕ್ಕಳು ಬಡವರು. ಹಣದ ಸಮಸ್ಯೆಯಿಂದ ನಾವು ಸರ್ಕಾರಿ ಕಾಲೇಜಿಗೆ ಸೇರುತ್ತೇವೆ ಮೊದಲು 3 ಸಾವಿರ, ನಂತರ 3 ಸಾವಿರ ಹೀಗೆ ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಹಣ ಪೀಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಬಿಕಾಂ , ಬಿಬಿಎ ಹಾಗೂ ಬಿಎ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫೀಸ್ 1800 ಇದ್ದು, 950 ಮಾಡಬೇಕು ಬೇರೆ ಕಾಲೇಜುಗಳಲ್ಲಿ 950 ಇದೆ. ಆದರೆ ಇಲ್ಲಿ ಜಾಸ್ತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
PublicNext
13/07/2022 09:31 pm