ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಪದವಿ‌ ಮುಗಿಸಿದ ವಿಧ್ಯಾರ್ಥಿಗಳಿಗೆ ಗುಡ್ ನ್ಯೂಸ್!

ಬೆಂಗಳೂರು: ಉತ್ತರ ಕಾಂಗ್ರೆಸ್‌ ಮತ್ತು ಕೆಬಿಜೆ ವಾಲಂಟೈಯರ್ಸ್‌ ಅವರಿಂದ ಮೇ 28 ರಂದು ಬೃಹತ್‌ ಉದ್ಯೋಗ ಮೇಳ ಕಲ್ಪಿಸಲಾಗಿದೆ. 5 ನೇ ಬಾರಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು. ಈ ಬಾರಿ ಮೂರು ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ಇದೆ.ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣಭೈರೇಗೌಡ ಅವರ ಸ್ವಯಂ ಸೇವಕರ ತಂಡದ ವತಿಯಿಂದ ಶನಿವಾರ ಮೇ 28, 2022 ರಂದು 5 ನೇ ಬಾರಿ ಬೃಹತ್‌ ಉದ್ಯೋಗ ಮೇಳ ವನ್ನು ಆಯೋಜಿಸಲಾಗಿದೆ ಎಂದು ಶ್ರೀಮತಿ ಮೀನಾಕ್ಷಿ ಕೃಷ್ಣ ಭೈರೇಗೌಡ ತಿಳಿಸಿದರು..

ಇಂದು ಪ್ರೆಸ್‌ಕ್ಲಬ್‌ ನಲ್ಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸತತವಾಗಿ ಕಳೆದ 5 ವರ್ಷಗಳಿಂದ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್‌ ಉದ್ಯೋಗ ಮೇಳವನ್ನು ಆಯೋಜಿಸುತ್ತಾ ಬಂದಿವೆ. ಕೊರೊನಾ ಸಾಂಕ್ರಾಮಿಕದ ಕಾರಣ ಕಳೆದ ಎರಡು ವರ್ಷಗಳಿಂದ ಈ ಮೇಳವನ್ನು ಆಯೋಜಿಸಲು ಆಗಿರಲಿಲ್ಲ. ಈ ಬಾರಿ ಸಾಂಕ್ರಾಮಿಕ ಕಡಿಮೆ ಆಗಿರುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಕೊರೊನಾ ಲಾಕ್‌ಡೌನ್‌ ನಿಂದ ಬಹಳಷ್ಟು ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಹಾಗೂ ವಿದ್ಯಭ್ಯಾಸ ಮುಗಿಸಿರುವ ಯುವಕ ಯುವತಿಯರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡುವುದು ನಮ್ಮ ಉದ್ದೇಶವಾಗಿದೆ.

ಕಳೆದ ನಾಲ್ಕು ಮೇಳದಲ್ಲಿ ಭಾಗವಹಿಸಿದ್ದ 17 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.. ಈ ಬಾರಿ ಇನ್ಪೋಸಿಸ್‌ ಬಿಪಿಓ, ಅಪೊಲೋ, ಹೆಚ್‌ಡಿಎಫ್‌ಸಿ, ಎಸ್‌ಬಿಐ, ಎಲ್‌ಐಸಿ, ಟೆಕ್‌ ಮಹಿಂದ್ರ, ಐಸಿಐಸಿ, ರಿಯಲನ್ಸ್‌ ನಂತಹ 110 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, 3 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳ ಲಭ್ಯತೆಯಿದೆ ಎಂದು ಹೇಳಿದರು. ಎಸ್‌ಎಸ್‌ಎಲ್‌ಸಿ, ಐಟಿಐ, ಇಂಜಿನೀಯರಿಂಗ್‌ ಸೇರಿದಂತೆ ಯಾವುದೇ ಪದವಿಧರರು ಕೂಡಾ ಈ ಮೇಳದಲ್ಲಿ ಭಾಗವಹಿಸಿ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಸಹಕಾರ ನಗರದ ದೇವ್‌-ಇನ್‌ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಈ ಮೇಳ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 080-23626678 ಗೆ ಸಂಪರ್ಕಿಸಲು ಕೋರಿದೆ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

26/05/2022 06:08 pm

Cinque Terre

1.21 K

Cinque Terre

0

ಸಂಬಂಧಿತ ಸುದ್ದಿ