ಬೆಂಗಳೂರು:ಪಠ್ಯ ಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕುವೆಂಪು ಪಾಠ ಇರುವ 4ನೇ ತರಗತಿ ಪರಿಸರ ಅಧ್ಯಯನ ಪುಸ್ತಕದ ಪರಿಷ್ಕರಣೆ ಆಗಿಲ್ಲ ಎಂದು ಪಠ್ಯ ಪುಸ್ತಕ ಸಂಘ ಸ್ಪಷ್ಟನೆ ನೀಡಿದೆ.
ಈ ಸಂಬಂಧ ಪಠ್ಯ ಪುಸ್ತಕ ಸಂಘ ಸ್ಪಷ್ಟೀಕರಣ ಪತ್ರ ಪ್ರಕಟಿಸಿದೆ. ಪ್ರಸ್ತುತ ಸುದ್ದಿ ಮಾಧ್ಯಮಗಳಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪುಠ್ಯ ಪುಸ್ತಕ ಸಮಿತಿಯವರು 4 ನೇ ತರಗತಿ ಪರಿಸರ ಅಧ್ಯಯನ ಅಧ್ಯಯನ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ಕುವೆಂಪು ರವರ ಬಗ್ಗೆ ಇದ್ದ ವಿಷಯವನ್ನು ಕೈಬಿಡಲಾಗಿದೆ ಅಥವಾ ಅಪಮಾನಗೊಳಿಸಲಾಗಿದೆ ಎಂದು ಪ್ರಸಾರ ಮಾಡಲಾಗುತ್ತಿದೆ.
ವಾಸ್ತವವಾಗಿ 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯ ಪುಸ್ತಕವನ್ನು ರೋಹಿತ್ ಚಕ್ರತೀರ್ಥ ಸಮಿತಿಯವರುಪರಿಷ್ಕರಿಸಿರುವುದಿಲ್ಲ.
ಬರಗೂರು ರಾಮಚಂದ್ರಪ್ಪ ರವರ ಸಮಿತಿಯು 2017-18ನೇ ಸಾಲಿ ನಲ್ಲಿ ಪರಿಷ್ಕರಿಸಿದ್ದ 4ನೇ ತರಗತಿ ಪರಿಸರ ಅಧ್ಯಯನ ಅಭ್ಯಾಸ ಸಹಿತ ಪಠ್ಯಪುಸ್ತಕದ “ಪ್ರತಿಯೊಬ್ಬರೂ ವಿಶಿಷ್ಟ “ ಎಂಬ ಪಾಠದಲ್ಲಿ "ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ' (ಕುವೆಂಪು) ಶೀರ್ಷಿಕೆ ಅಡಿಯಲ್ಲಿ ಇದ್ದ - 9 ಸಾಲುಗಳ ವಿಷಯಾಂಶವನ್ನು 2022-23ನೇ ಸಾಲಿನ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಸಚಿವ ಬಿ.ಸಿ. ನಾಗೇಶ್ ರವರು ತಮ್ಮ ಟ್ವಿಟರ್ ನಲ್ಲಿ ಈ ಪತ್ರವನ್ನು ಹಾಕಿ ಸ್ಪಷ್ಟನೆ ನೀಡಿದ್ದಾರೆ.
Kshetra Samachara
24/05/2022 03:22 pm