ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈರಸಂದ್ರದ ಸರಕಾರಿ ಶಾಲೆಯನ್ನು ದತ್ತು ಪಡೆದ ಶಾಸಕಿ ಸೌಮ್ಯ ರೆಡ್ಡಿ

ಬೆಂಗಳೂರು: ಜಯನಗರದ ಎಂಎಲ್ಎ ಸೌಮ್ಯ ರೆಡ್ಡಿ ಬೈರಸಂದ್ರದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ ಮತ್ತು ಈ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಯ ರೀತಿ ಅಭಿವೃದ್ಧಿ ಮಾಡಿ ಭೈರಸಂದ್ರದ ವಾರ್ಡ್‌ನ ಮಕ್ಕಳು ಸರಕಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆಯಲು ಶಾಸಕಿ ಸೌಮ್ಯಾರೆಡ್ಡಿ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.

ಸರ್ಕಾರಿ ಶಾಲೆಯನ್ನು ದತ್ತು ಪಡೆದು ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಸಿಗುವಂತಹ ಸೌಲಭ್ಯಗಳು ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೆ ಸಿಗಬೇಕು ಎನ್ನುವ ಕಾರಣದಿಂದ ಶಾಸಕಿ ಸೌಮ್ಯಾರೆಡ್ಡಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುತ್ತಿದ್ದಾರೆ.

ನಾವು ಈ ಕೂಡಲೇ ಎಚ್ಚೆತ್ತುಕೊಂಡು ಸರಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು ಇಲ್ಲವಾದರೆ ಮುಂದೊಂದು ದಿನ ಸರಕಾರಿ ಶಾಲೆಗಳು ಕಣ್ಮರೆಯಾಗುವುದು. ಇನ್ನೂ ಹಲವಾರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಸೌಮ್ಯ ರೆಡ್ಡಿ ಹೇಳಿದರು.

ಸರ್ಕಾರಿ ಶಾಲೆ ದತ್ತು ಪಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಮತ್ತು ಜಯನಗರದ ಮಾಜಿ ಕಾರ್ಪೊರೇಟರ್ ಗಳು ಭಾಗಿಯಾಗಿದ್ದರು.

ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagaraj Tulugeri
Kshetra Samachara

Kshetra Samachara

03/05/2022 04:56 pm

Cinque Terre

1.49 K

Cinque Terre

0

ಸಂಬಂಧಿತ ಸುದ್ದಿ