ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರಗಳನ್ನು ರದ್ದು ಮಾಡಬೇಕೆಂದು ವಿವಿ ಸಿಂಡಿಕೇಟ್ ಸದಸ್ಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಿಂಡಿಕೇಟ್ ಸದಸ್ಯರ ನಿಯೋಗ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ.
ಬೆಂವಿವಿ ಇತ್ತೀಚೆಗೆ ನಡೆಸಿದ್ದ 163 ನೇ ಸಿಂಡಿಕೇಟ್ ಸಭೆಯಲ್ಲಿ ಕೋರಂ ಇರಲಿಲ್ಲ. ಆದರೂ ಕುಲಪತಿಗಳು ಸಭೆ ನಡೆಸಿ ಹಲವು ಪ್ರಮುಖ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಂಡಿದ್ದಾರೆ. ನಿರ್ಣಯಗಳನ್ನು ರದ್ದು ಮಾಡಬೇಕು. ಇತ್ತೀಚೆಗೆ ಬೋರ್ಡ್ ರೂಮ್‌ನಲ್ಲಿ ಸಿಂಡಿಕೇಟ್ ಸದಸ್ಯರನ್ನು ಕೂಡಿ ಹಾಕಲಾಗಿತ್ತು. ಈ ನೌಕರರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
ಜನವರಿ ಮೊದಲ ವಾರ ನಡೆದಿದ್ದ ಸಿಂಡಿಕೇಟ್ ಸಭೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕವಾದ ನೌಕರರಿಗೆ ಬಡ್ತಿ ನೀಡಲು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದನ್ನು ಸಿಂಡಿಕೇಟ್ ಸದಸ್ಯರು ಒಪ್ಪಿಕೊಂಡಿಲ್ಲ. ಈ ನಿರ್ಣಯವನ್ನು ರದ್ದು ಮಾಡಬೇಕೆಂದು ಸದಸ್ಯರು ಪ್ರಮುಖವಾಗಿ ಒತ್ತಾಯಿಸಿದ್ದಾರೆ.
PublicNext
28/02/2022 06:04 pm