ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸಕೋಟೆ ತಾಲೂಕು ಆಡಳಿತದ ವತಿಯಿಂದ ಕೃಷ್ಣಜನ್ಮಾಷ್ಟಮಿ ಆಚರಣೆ

ಹೊಸಕೋಟೆ: ಕರ್ಮ ಮತ್ತು ಧರ್ಮ ಸಿದ್ದಾಂತವನ್ನು ಜಗತ್ತಿಗೆ ಸಾರಿದ ಭಗವಂತ ಕೃಷ್ಣನಿಗೆ ಇಂದು ಜನ್ಮಷ್ಠಾಮಿಯ ಸಂಭ್ರಮ. ಈ ಹಬ್ಬದ ಪ್ರಯುಕ್ತ ಹೊಸಕೋಟೆ ತಾಲೂಕು ಆಡಳಿತ ಇಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಶ್ರೀಕೃಷ್ಣದೇವರಿಗೆ ಪೂಜೆ ಸಲ್ಲಿಸಿ ನಮಸಿದರು. ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ತಹಶಿಲ್ದಾರ್ ಮಹೇಶ್ ಕುಮಾರ್ , ತಾಲೂಕು ಕಚೇರಿ ಸಿಬ್ಬಂದಿ ಮತ್ತು ಗಣ್ಯರು ಕೃಷ್ಣಜನ್ಮಾಷ್ಠಮಿ ಪೂಜೆಯಲ್ಲಿ ಭಾಗವಹಿಸಿದ್ದರು..

ಇದೇ ವೇಳೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ದೇವರು ಧರ್ಮದ ರಕ್ಷಣೆಗೆ ಅವತಾರ ತಾಳಿ ಅಧರ್ಮವನ್ನು ಅಳಿಸುತ್ತಾನೆ. ಸಮಸ್ತ ಜನತೆಗೂ ಭಗವಂತ ಶುಭವನ್ನುಂಟುಮಾಡಲಿ ಎಂದರು.

Edited By : Manjunath H D
Kshetra Samachara

Kshetra Samachara

19/08/2022 07:35 pm

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ