ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚೀನಾ ನಂತರ ಭಾರತದಲ್ಲಿನ ಮಾನವ ಸಂಪನ್ಮೂಲ ಹೆಚ್ಚಿದೆ ಶಾಸಕ ಲಿಂಬಾವಳಿ

ವರದಿ- ಬಲರಾಮ್ ವಿ

ಬೆಂಗಳೂರು: ಪೂರ್ವ ತಾಲ್ಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣವನ್ನು ಶಾಸಕ ಅರವಿಂದ ಲಿಂಬಾವಳಿ ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು, ಹರ್ ಘರ್ ತಿರಂಗ ಅಭಿಯಾನ ಯಶಸ್ವಿಯಾಗಿ ನೆರವೇರಿದ್ದು,ಕೋಮುಗಲಭೆ, ಜಾತಿ ಧರ್ಮಗಳ ನಡುವಿನ ಸಂಘರ್ಷಕ್ಕೆ ಅವಕಾಶ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು, ಶಾಂತಿಯನ್ನು ಕದಡುವವರ ವಿರುದ್ದ ಕಾನೂನು ರೀತಿ ಕಠಿಣ‌ಕ್ರಮ ಜರುಗಿಸಿ ಬುದ್ದಿ ಕಲಿಸುವ ಅಗತ್ಯ ಇದೆ ಎಂದು ಹೇಳಿದರು. 100ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಭಾರತ ವಿಶ್ವ ಗುರು ಆಗುವ ನಿಟ್ಟಿನಲ್ಲಿ, ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು.

ಬೆಂಗಳೂರು ಉದ್ಯಾನ ನಗರಿ, ಸಿಲಿಕಾನ್ ಸಿಟಿಯಾಗಿದೆ. ಆದರೂ, ಇಲ್ಲಿ ಸಂಚಾರ ಅವ್ಯವಸ್ಥೆ, ಕಾಂಕ್ರೀಟ್ ಕಾಡು ಸೇರಿದಂತೆ ಅನೇಕ ಸಮಸ್ಯೆಗಳಿವೆ..ಪರಿಸರ ಸಂರಕ್ಷಣೆ, ಕೆರೆ ಕಾಲುವೆಗಳ ಒತ್ತುವರಿ ಮುಕ್ತ ಮಾಡಿ ಸಮಸ್ಯೆಗಳಿಂದ ಮುಕ್ತವಾಗಿ ಎಂದು ಅವರು ಸಲಹೆ ನೀಡಿದರು. ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಎಸ್.ಅಜೀತ್ ಕುಮಾರ್ ರೈ ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

15/08/2022 07:27 pm

Cinque Terre

45.84 K

Cinque Terre

0

ಸಂಬಂಧಿತ ಸುದ್ದಿ