ಬೆಂಗಳೂರು: ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸಿದ ಹಿನ್ನೆಲೆ ಕಾಂಗ್ರೆಸ್ ನಾಯಕರ ವಿರುದ್ಧ ಹೈಗ್ರೌಂಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದ ಹಿನ್ನೆಲೆ ಕಾಂಗ್ರೆಸ್ ನಾಯಕರ ಮೇಲೆ ಎಫ್ಐಆರ್ ದಾಖಲಾಗಿದೆ. ಏಪ್ರಿಲ್ 14 ರಂದು ಈಶ್ವರಪ್ಪ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಯಾವುದೇ ಅನುಮತಿ ಇಲ್ಲದೇ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿದ ಹಿನ್ನೆಲೆ, ವಿಪಕ್ಷ ನಾಯಕ ಸಿದ್ದರಾಮಯ್ಯ A1 KPCC ಅಧ್ಯಕ್ಷ DK ಶಿವಕುಮಾರ್ A2 ರಣದೀಪ್ ಸಿಂಗ್ ಸುರ್ಜೆವಾಲಾ A-3 ಸೇರಿಂದತೆ 36ನಾಯಕರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಅನುಮತಿ ಇಲ್ಲದೇ ಅಕ್ರಮ ಕೂಟ ಸೇರಿ, ಸಂಚಾರಕ್ಕೆ ಅಡ್ಡಿಪಡಿಸಿ ಪತ್ರಿಭಟನೆ ನಡೆಸಿದ್ದ ಆರೋಪ ಹಿನ್ನೆಲೆ ಹೈ ಗ್ರೌಂಡ್ ಠಾಣೆಯಲ್ಲಿ IPC 143, 341 ಅಡಿಯಲ್ಲಿ FIR ದಾಖಲಿಸಿಕೊಂಡಿದ್ದಾರೆ.
PublicNext
18/04/2022 02:53 pm