ಬೆಂಗಳೂರು: ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ವಿರುದ್ಧ ಲೈಂಗಿಕ ದೌಜನ್ಯದ ಆರೋಪ ಮಾಡಿರೋ ಮಹಿಳೆ ಮಾಧ್ಯಮದ ಮುಂದೆ ಪ್ರತ್ಯಕ್ಷ ಆಗಿದ್ದಾರೆ.
ಮುಖಕ್ಕೆ ಬಟ್ಟೆ ಸುತ್ತಿಕೊಂಡೇ ಮಾತನಾಡಿದ ಮಹಿಳೆ,ನಾನು ನ್ಯಾಯ ಕೇಳಿದೆ. ನನಗೆ ನ್ಯಾಯ ಸಿಕ್ಕೇ ಇಲ್ಲ. ನಿನ್ನೆ ವಿಧಾನಸೌದದ ಪೊಲೀಸರು ನನಗೆ ಸಾಕಷ್ಟು ಹಿಂಸೆ ಕೊಟ್ಟಿದ್ದಾರೆ. ಸಂಜೆ 7.30 ರಿಂದ ರಾತ್ರಿ 9 ಗಂಟೆವರೆಗೂ ಬಹಳಷ್ಟು ಹಿಂಸೆ ಕೊಟ್ಟಿದ್ದಾರೆ ಎಂದೇ ಮಹಿಳೆ ದೂರಿದ್ದಾರೆ.
ಶಾಸಕರು ನನಗೆ ಚಿಕ್ಕಂದಿನಿಂದಲೂ ಪರಿಚಯ.ಅವರಿಂದ ಹುಟ್ಟಿದ ಮಗು ನನ್ನದೇ ಅಂತಲು ಶಾಸಕರು ಒಪ್ಪಿಕೊಂಡಿದ್ದಾರೆ. ಆದರೆ ಈಗ ನನಗೆ ಮೋಸ ಆಗಿದೆ. ಅದಕ್ಕೇನೆ ಕಾನೂನು ರೀತಿ ನ್ಯಾಯ ಪಡೆಯೋಕೆ ಮುಂದಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಮಹಿಳೆ ಹಿನ್ನೆಲೆ:
ಮಹಿಳೆಗೆ ಈಗಾಗಲೇ ಎರಡು ಮಕ್ಕಳಿವೆ. ಅವುಗಳಲ್ಲಿ ಒಂದು ಶಾಸಕರದ್ದು ಎಂದು ಮಹಿಳೆ ಹೇಳಿದ್ದಾರೆ. ಮೊದಲ ಗಂಡನಿಂದ ಈ ಮಹಿಳೆ ಡಿವೋರ್ಸ್ ಪಡೆದಿದ್ದಾರೆ. ಕಳೆದ 6 ವರ್ಷದ ಹಿಂದೆ ಎರಡನೇ ಮದುವೆ ಆಗಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದರು.
ಕಳೆದ 15 ವರ್ಷದ ಹಿಂದೆ ಶಾಸಕ ರಾಜಕುಮಾರ ಪಾಟೀಲ್ ಇದ್ದ ಏರಿಯಾದಲ್ಲಿಯೇ ಈ ಮಹಿಳೆ ವಾಸವಾಗಿದ್ದರಂತೆ. ಆಗಲೇ ಶಾಸಕರಿಗೂ ಈ ಮಹಿಳೆಗೂ ಪರಿಚಯವಿತ್ತಂತೆ.
PublicNext
07/02/2022 04:03 pm