ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮನೆ ಹಿಂದೆಯೇ ಗಾಂಜಾ ಕೃಷಿ!

ಬೆಂಗಳೂರು: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಮನೆ ಹಿಂಭಾಗದಲ್ಲೇ ದುಷ್ಕರ್ಮಿಗಳು ಗಾಂಜಾ ಕೃಷಿ ನಡೆಸಿದ್ದಾರೆ! ಮಾಜಿ ಶಾಸಕರ ಮನೆ ಸುತ್ತಮುತ್ತ ಪೊಲೀಸ್ರು ಬರಲ್ಲ. ಜತೆಗೆ ಖಾಲಿ ಜಾಗ ಬೇರೆ, ಯಾರೂ ಕಣ್ಣು ಹಾಕೊಲ್ಲ‌ಅಂತ ಈ ಮನೆಹಾಳ ಚಾಲಾಕಿಗಳು ಖಾಲಿ ನಿವೇಶನದಲ್ಲಿ ಸಮೃದ್ಧ ಗಾಂಜಾ ಬೆಳೆದಿದ್ದಾರೆ.

ಆರ್.ಟಿ.ನಗರದ ಮಂಜುನಾಥ್ ಲೇಔಟ್ ನ ಮುಖ್ಯ ರಸ್ತೆಯಲ್ಲಿರುವ ಬೇಳೂರು ಗೋಪಾಲಕೃಷ್ಣ ನಿವೇಶನದ ಹಿಂದೆ‌ ಗಾಂಜಾ ಗಿಡಗಳು ಫಲವತ್ತಾಗಿ ಬೆಳೆದಿದೆ. ಈ ಗಾಂಜಾ ಗಿಡಗಳ‌ನ್ನು ಕಂಡು ಖುದ್ದು ಗೋಪಾಲಕೃಷ್ಣ ಕಂಡು ಶಾಕ್ ಆಗಿ ಬಿಟ್ಟಿದ್ದು, ಪೊಲೀಸರಿಗೆ ಮಾಹಿತಿ ನೀಡಿ ಗಾಂಜಾ ಗಿಡಗಳನ್ನು ಅವರ ಸುಪರ್ದಿಗೆ ಒಪ್ಪಿಸಿದ್ದಾರೆ.

ಮಾಹಿತಿ ಆಧರಿಸಿ ಆರ್.ಟಿ.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ನಿವೇಶನ ಮಾಲೀಕರ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಏರಿಯಾದಲ್ಲಿನ ಗಾಂಜಾ ಹುಡುಗರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

12/07/2022 08:53 pm

Cinque Terre

4.98 K

Cinque Terre

0

ಸಂಬಂಧಿತ ಸುದ್ದಿ