ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಿವೇಶನಕ್ಕಾಗಿ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿದ ಪರಿಶಿಷ್ಟರ ಕುಟುಂಬಗಳು

ದೊಡ್ಡಬಳ್ಳಾಪುರ: ಸ್ವಂತ ನೆಲೆಯಲ್ಲಿ ನೆಮ್ಮದಿಯ ಜೀವನ ಪಡೆಯಲು ಸರ್ಕಾರಿ ಜಾಗದಲ್ಲಿ 40 ಪರಿಶಿಷ್ಟ ಕುಟುಂಬಗಳು ಗುಡಿಸಲು ಹಾಕಿಕೊಂಡು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಅದೇ ಜಾಗದ ಮೇಲೆ ಬಲಾಢ್ಯನ ಕಣ್ಣು ಬಿತ್ತು. ಜಾಗ ಹೊಡೆಯುವ ಸಂಚು ನಡೆಸಿದ ಆತ ರಾತ್ರೋರಾತ್ರಿ ಗುಡಿಸಲುಗಳಿಗೆ ಬೆಂಕಿ ಇಟ್ಟು ಪರಿಶಿಷ್ಟರನ್ನ ಒಕ್ಕಲೆಬ್ಬಿಸಲು ಯತ್ನಿಸಿದ.

ದೊಡ್ಡಬಳ್ಳಾಪುರ ತಾಲೂಕಿನ ಕನಕೇನಹಳ್ಳಿ ಗ್ರಾಮದ ಸರ್ವೆ ನಂಬರ್ 58ರಲ್ಲಿ 3ಎಕರೆ 20ಗುಂಟೆ ಜಮೀನು ಶಾನುಭೋಗ ಇನಾಮ್ತಿ ಇದ್ದು, ಗ್ರಾಮದಲ್ಲಿನ ಬಹುತೇಕ ಜನರಿಗೆ ನಿವೇಶನ ಇರಲಿಲ್ಲ, ಶಾನುಭೋಗ ಇನಾಮ್ತಿ ಜಮೀನು ಸರ್ಕಾರಿ ಜಾಗವಾಗಿದ್ದು ಗ್ರಾಮದ ಸುಮಾರು 40 ಕುಟುಂಬಗಳು ಇದೇ ಜಾಗದಲ್ಲಿ ಗುಡಿಸಲುಗಳನ್ನ ಹಾಕಿಕೊಂಡು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಇದೇ ಜಾಗದ ಮೇಲೆ ಗ್ರಾಮದ ಮುತ್ತುರಾಜೇಗೌಡನ ಕಣ್ಣು ಬಿದ್ದಿದೆ. ಹೇಗಾದ್ರೂ ಮಾಡಿ ಜನರನ್ನ ಇಲ್ಲಿಂದ ಓಡಿಸಬೇಕೆಂಬ ಸಂಚು ನಡೆಸಿದ ಮುತ್ತುರಾಜೇಗೌಡ ಮತ್ತು ಮಧು ಎಂಬುವರು ಕಳೆದ ಮಂಗಳವಾರ ರಾತ್ರಿ ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದಾರೆ.

ಮಂಗಳವಾರ ರಾತ್ರಿ ಗ್ರಾಮದ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಇದ್ದು, ಗ್ರಾಮಸ್ಥರು ದೇವಸ್ಥಾನದಲ್ಲಿ ಸೇರಿದ್ದರು ಈ ಸಮಯದಲ್ಲಿ ಮುತ್ತುರಾಜೇಗೌಡ ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದಾನೆ ಎನ್ನಲಾಗಿದೆ. ಬೆಂಕಿ ಹಚ್ಚಿದ‌ ಸಂದರ್ಭದಲ್ಲಿ ವೃದ್ಧೆಯೊಬ್ಬರು ಗುಡಿಸಲೊಂದರಲ್ಲಿ ಇದ್ದರು. ಅಸ್ವಸ್ಥಗೊಂಡಿದ್ದ ಅವರನ್ನ ರಕ್ಷಿಸಿದ್ದಾರೆ, ಸ್ಥಳಕ್ಕೆ ಗ್ರಾಮಸ್ಥರು ಬರಲು ತಡವಾಗಿದ್ದಾರೆ ಎಲ್ಲಾ ಗುಡಿಸಲುಗಳಿಗೆ ಬೆಂಕಿ ಇಡುತ್ತಿದ್ದರೆಂಬುದು ಗುಡಿಸಲು ಕಳೆದುಕೊಂಡವರು ತಮ್ಮ ನೋವು ತೊಡಿಕೊಂಡರು.

ಶಾನುಭೋಗ ಇನಾಮ್ತಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಗುಡಿಸಲು ವಾಸಿಗಳು ಮುತ್ತುರಾಜೇಗೌಡ ನಡುವೆ ವ್ಯಾಜ್ಯ ಇದ್ದು, ಈಗಾಗಲೇ ಡಿ.ಸಿ ಮತ್ತು ಎ.ಸಿ ಕೋರ್ಟ್‌ನಲ್ಲಿ ಕುಟುಂಬಗಳ ಪರವಾಗಿಯೆ ಆದೇಶ ಬಂದಿತ್ತು. ಇದನ್ನು ಪ್ರಶ್ನಿಸಿ ಮುತ್ತುರಾಜೇಗೌಡ ನ್ಯಾಯಾಲಯದ ಮೆಟ್ಟಿಲು ತುಳಿದಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಯಥಾ ಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ.

ಕನಕೇನಹಳ್ಳಿ ಗ್ರಾಮದ ಪರಿಶಿಷ್ಟರ ಕಾಲೊನಿ ಕಿಷ್ಕಿಂಧೆಯಂತಿದೆ. ಮೂಲಭೂತ ಸೌಲಭ್ಯಗಳು ಇವರ ಪಾಲಿಗೆ ಮರೀಚಿಕೆಯಾಗಿದೆ. ನ್ಯಾಯಯುತವಾಗಿ ಇಂಥವರಿಗೆ ಸಿಗಬೇಕಾದ ನಿವೇಶನಗಳ ಮೇಲೆ ಬಲಾಢ್ಯರು ಕಣ್ಣಿಟ್ಟಿರುವುದು ವ್ಯವಸ್ಥೆಯ ದುರಂತವಾಗಿದೆ.

Edited By :
Kshetra Samachara

Kshetra Samachara

06/05/2022 12:22 pm

Cinque Terre

7.39 K

Cinque Terre

0

ಸಂಬಂಧಿತ ಸುದ್ದಿ