ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಕ್ಫ್ ಆಸ್ತಿ ಹಗರಣವನ್ನು ಸಿಬಿಐಗೆ ಒಪ್ಪಿಸಿ; ಅಸೆಂಬ್ಲಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಬೆಂಗಳೂರು: ಮಂಗಳೂರು ದಕ್ಷಣ ಶಾಸಕ ವೇದವ್ಯಾಸ್ ಕಾಮತ್ ವಕ್ಫ್ ಆಸ್ತಿ ಹಗರಣ, ವಿವಿ ಸಂಧ್ಯಾ ಕಾಲೇಜಿನ ಬೋಧಕೇತರ ಸಿಬ್ಬಂದಿ ಕೊರತೆ ಹಾಗೂ ಆಟೋರಿಕ್ಷಾ ಪ್ರಮಾಣ ಪತ್ರ ನೀಡಿಕೆ ಸರಳೀಕರಣ ವಿಷಯಗಳ ಕುರಿತು ಸರ್ಕಾರದ ಗಮನ ಸೆಳೆದರು.

ರೆವೆನ್ಯೂ ಭೂಮಿಗೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಟ್ಟ ಹಣವನ್ನು ಕನ್ವರ್ಟ್ ಮಾಡಿ ವಕ್ಫ್ ಆಸ್ತಿಯೆಂದು ಮಾಡಲಾಗುತ್ತಿದೆ. ಬಿಕರ್ಣಕಟ್ಟೆಯಲ್ಲಿರುವ ಮಸೀದಿಯ ಬಾಡಿಗೆ ಕಟ್ಟಡದ ಹಣವನ್ನು ವಕ್ಫ್ ಆಸ್ತಿ ಸಮಿತಿಯ ಅಧ್ಯಕ್ಷ ವೈಯಕ್ತಿಕವಾಗಿ ಪಡೆಯುತ್ತಿದ್ದಾರೆಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಆದ್ದರಿಂದ ಸಿಎಂ ಅವರು ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕೆಂದು ಆಗ್ರಹಿಸಿದರು.

ವಕ್ಫ್ ಆಸ್ತಿ ಕಬಳಿಕೆ ವಿಚಾರದಲ್ಲಿ ಅಂದಿನ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ಸಮಗ್ರ ವರದಿಯನ್ನು ಸಲ್ಲಿಸಿದ್ದರೂ, ಸಿದ್ದರಾಮಯ್ಯ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಅದನ್ನು ಮೂರು ಬಾರಿ ತಿರಸ್ಕರಿಸಿತು. ಅಲ್ಲದೆ ವಕ್ಫ್ ಆಸ್ತಿ ಕಬಳಿಕೆಯ ವಿಚಾರ ಕಳೆದ ಹತ್ತಾರು ವರ್ಷಗಳಿಂದ ಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಸರ್ಕಾರದ ಹಣ ಸಮ್ಮನೆ ಪೋಲಾಗುತ್ತಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಇದನ್ನು ಸಿಬಿಐ ತನಿಖೆಗೊಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಬೋಧಕೇತರ ಸಿಬ್ಬಂದಿಯ ಕೊರತೆ:

ರಾಜ್ಯ ಸರ್ಕಾರದಿಂದ ಹೊಸದಾಗಿ ವಿವಿ ಆರಂಭಿಸುವುದಕ್ಕೆ ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಸದ್ಯ ಇರುವ ವಿವಿಗಳ ಕೊರತೆಯನ್ನು ಸರಿಪಡಿಸುವ ಕಾರ್ಯ ಆಗಬೇಕು. ಅಲ್ಲದೆ ಸಿಂಡಿಕೆಟ್ ಸೆನೆಟ್ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು, ಅಂದಿನಿಂದ ಇಂದಿನವರೆಗಿನ ಭ್ರಷ್ಟಾಚಾರ, ಹಗರಣಗಳ ಬಗ್ಗೆ ತನಿಖೆಯಾಗಲಿ ಎಂದೂ ಆಗ್ರಹಿಸಿದರು.

ಪ್ರಮಾಣ ಪತ್ರ:

ಮಂಗಳೂರು, ಸುರತ್ಕಲ್ ಮತ್ತು ಗುರುಪುರ ಹೋಬಳಿಯ ಆಟೋರಿಕ್ಷಾ ಮೀಟರ್‌ಗಳ ಪ್ರಮಾಣ ಪತ್ರಗಳನ್ನು ಈ ಹಿಂದಿನಂತೆಯೇ ಮಂಗಳೂರಿನಲ್ಲಿರುವ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರ ಕಚೇರಿಯಲ್ಲಿಯೇ ಮುದ್ರಿಸಿ ಆಟೊರಿಕ್ಷಾ ಚಾಲಕರಿಗೆ ಕೊಡುತ್ತಿಲ್ಲ. ಮಂಗಳೂರಿನ ಕೆಲವು ಭಾಗಗಳಲ್ಲಿ ಮೀಟರ್ ಪ್ರಮಾಣ ಪತ್ರವನ್ನು ಮೂಡುಬಿದಿರೆಗೆ ಹೋಗುವುದು ಅನಿವಾರ್ಯವಿದೆ. ಮಂಗಳೂರು ಕಚೇರಿಯಲ್ಲಿ ಅಧಿಕಾರಿಗಳ ಕೊರತೆಯಿದ್ದು, ಇದರಿಂದ ಆಟೋರಿಕ್ಷಾ ಚಾಲಕರು ನಗರದಿಂದ 40 ಕಿ.ಮೀ. ಹೊರಗಡೆ ಹೋಗಿ ಪ್ರಮಾಣ ಪತ್ರವನ್ನು ಪಡೆಯುವಂತಹ ಕೆಲಸ ಆಗುತ್ತಿದೆ. ಇದನ್ನು ಸಾರಿಗೆ ಸಚಿವರು ಗಂಭೀರವಾಗಿ ಪರಿಗಣಿಸಿ, ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಹೇಳಿದರು. ಇದಕ್ಕೆ ಸಾರಿಗೆ ಸಚಿವರು ಇದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿ ಸಮಸ್ಯೆ ಬಗೆಹರಿಸುವುದಾಗಿ ನೀಡಿದರು.

Edited By : Somashekar
PublicNext

PublicNext

22/09/2022 04:28 pm

Cinque Terre

35.77 K

Cinque Terre

2

ಸಂಬಂಧಿತ ಸುದ್ದಿ