ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈದ್ಗಾ ಮೈದಾನ ವಿವಾದ ತಾರಕಕ್ಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆ ಮೈದಾನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಈದ್ಗಾ ಮೈದಾನ ಅಲ್ಲ, ಇದು ಬಿಬಿಎಂಪಿ ಸ್ವತ್ತು. ನಮಗೂ ಈ ಸ್ಥಳದಲ್ಲಿ ಕಾರ್ಯಕ್ರಮ, ಉತ್ಸವ, ಯೋಗ ದಿನಾಚರಣೆ, ಮಾಡಲು ಅವಕಾಶ ಕೊಡಬೇಕು ಅಂತ ಹಿಂದೂ ಸಂಘಟನೆಗಳು ಪಟ್ಟುಹಿಡಿದಿವೆ. ಇನ್ನು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಿದ್ದು, ಒಂದು ತಿಂಗಳು ಡೆಡ್ ಲೈನ್ ನೀಡಿವೆ.

ಬೆಂಗಳೂರಿನ ಹೃದಯಭಾಗ ಚಾಮರಾಜಪೇಟೆಯಲ್ಲಿರುವ ಮೈದಾನ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಈದ್ಗಾ ಮೈದಾನ ಅಲ್ಲ, ಬಿಬಿಎಂಪಿ ಆಟದ ಮೈದಾನ ಅನ್ನೋ ವಿಚಾರ ಮತ್ತೆ ಮತ್ತೆ ಫ್ರೂ ಆಗುತ್ತಿದೆ. ಈ ಜಾಗದಲ್ಲಿ ಮುಸ್ಲಿಮರು ವರ್ಷಕ್ಕೆ ಎರಡು ಬಾರಿ ಪ್ರಾರ್ಥಿಸಲು ಅವಕಾಶ ನೀಡಲಾಗಿದೆ. ಆದರೆ ಹಿಂದೂ ಧರ್ಮದವರಿಗೆ ಯಾವುದೇ ಸಭೆ, ಸಮಾರಂಭ, ಉತ್ಸವ, ಯೋಗ ದಿವಸ, ರಾಷ್ಟ್ರೀಯ ಹಬ್ಬದ ಸಮಯದಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿಲ್ಲ. ಹೀಗಾಗಿ ಹಿಂದೂ ಸನಾತನ ಪರಿಷತ್ತಿನವರು ನಮಗೂ ಈ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ.

ಬಿಬಿಎಂಪಿ ಸ್ವತ್ತು ಅಂದ್ರೆ ಅದು ಸಾರ್ವಜನಿಕರ ಆಸ್ತಿ. ಅಲ್ಲಿ ಎಲ್ಲ ಧರ್ಮದವರಿಗೂ ಅವಕಾಶ ಇದೆ. ಆದ್ರೆ ಕೇವಲ ಒಂದು ಸಮುದಾಯದವರಿಗೆ ಇಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟು, ನಮಗ್ಯಾಕೆ ತಾರತಮ್ಯ ಮಾಡ್ತಾ ಇದ್ದೀರಿ, ಅಂತ ವಿಶ್ವ ಸನಾತನ ಧರ್ಮದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಕುರಿತು ದಾಖಲೆಗಳ ಸಮೇತ ಇನ್ನು ಎರಡ್ಮೂರು ದಿನಗಳಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಲಿದ್ದು, ಒಂದು ತಿಂಗಳ ಡೆಡ್ ಲೈನ್ ನೀಡಲಿವೆ. ಒಂದು ತಿಂಗಳ ಒಳಗೆ ನಮಗೂ ಸಮಾನವಾದ ಅವಕಾಶ ಈ ಮೈದಾನದಲ್ಲಿ ನೀಡಬೇಕು, ಇಲ್ಲದಿದ್ದರೆ ನಾವು ಇಲ್ಲಿರುವ ಈದ್ಗಾ ಟವರ್‌ ಅನ್ನು ನೆಲಸಮ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರನ್ನು ಪ್ರಶ್ನಿಸಿದ್ರೆ, ಪಡೆದು ಹೇಳ್ತಿನಿ ಅಂತಾರೆ.

ಈ ಬಿಬಿಎಂಪಿ ಜಾಗವನ್ನ ಅಕ್ರಮವಾಗಿ ವಶಪಡಿಸಿಕೊಂಡು ಇಲ್ಲಿ ಈಗ ಈದ್ಗಾ ಟವರ್ ಮಾಡಿದ್ದಾರೆ. ಮುಂದು ಮಸೀದಿ ನಿರ್ಮಾಣ ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಬಿಎಂಪಿ, ಸ್ಪಷ್ಟನೆ ನೀಡಬೇಕಿದೆ.

Edited By : Somashekar
Kshetra Samachara

Kshetra Samachara

03/06/2022 07:24 pm

Cinque Terre

5.15 K

Cinque Terre

0

ಸಂಬಂಧಿತ ಸುದ್ದಿ