ದೊಡ್ಡಬಳ್ಳಾಪುರ: ಎಲ್ಐಸಿ ಪ್ರೀಮಿಯಂ ಮೇಲೆ ಹಾಕುತ್ತಿರುವ ಜಿಎಸ್‌ಟಿ (GST) ಹಿಂಪಡೆಯುವಂತೆ ಒತ್ತಾಯಿಸಿ ಲಿಯಾಫಿ ಜಂಟಿಕ್ರಿಯಾ ಸಮಿತಿ ಮಾರ್ಗದರ್ಶನದಲ್ಲಿ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ನೇತೃತ್ವದಲ್ಲಿ ಎಲ್ಐಸಿ ಏಜೆಂಟರು ನಗರದ ಎಲ್ಐಸಿ ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಸಾಲದ ಮೇಲಿನ ಬಡ್ಡಿದರ ಕಡಿತಗೊಳಿಸಬೇಕು. ಪಾಲಿಸಿದಾರರಿಗೆ ಬೋನಸ್ ಹೆಚ್ಚಿಸಬೇಕು. ಗುಂಪು ವಿಮೆ ಹಾಗೂ ಗ್ರ್ಯಾಚುಯಿಟಿ ಮೊತ್ತ ಹೆಚ್ಚಿಸಬೇಕು. ಪ್ರತಿನಿಧಿಗಳಿಗೆ ಕ್ಷೇಮ ನಿಧಿ ಆರಂಭಗೊಳಿಸಬೇಕು. ಪ್ರತಿನಿಧಿಗಳಿಗೆ ಗುಂಪು ವೈದ್ತಕೀಯ ವಿಮೆ ಜಾರಿಗೊಳಿಸಬೇಕು. ಪ್ರತಿನಿಧಿಗಳಿಗೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಅಲ್ಲದೇ ವೃತ್ತಿಪರರನ್ನಾಗಿ ಗುರುತಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
PublicNext
06/09/2022 06:15 pm