ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ವ್ಯಾಪ್ತಿ ಪಾಲಿಹೌಸ್ ಮತ್ತು ಫಾರ್ಮ್ ಹೌಸ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಳೆಯ ಪ್ರವಾಹ ನೀರಿನಲ್ಲಿ ಸಿಲುಕಿಕೊಂಡು ಪರಿತಪಿಸುತ್ತಿದ್ದರು. ಮಂಗಳವಾರ ಸಂಜೆಯವರೆಗೂ ಮಹಿಳೆಯರು, ಮಕ್ಕಳು ಮತ್ತು ಪುರುಷರು ಸೇರಿ ಒಟ್ಟು 40 ಜನ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಬುಧವಾರ 22 ಜನರನ್ನು ರಕ್ಷಿಸುವ ಮೂಲಕ 62 ಜನರನ್ನು ಸಂರಕ್ಷಿಸಲಾಗಿದೆ.
ಹೊಸಕೋಟೆ ತಾಲೂಕು ವಿಪತ್ತು ನಿರ್ವಹಣಾ ಪಡೆ, ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಿನ್ನೆಯಿಂದ ಕಾರ್ಯಾಚರಣೆ ನಡೆಸಿ, ಇಂದು ಸಹ ಮುಂದುವರೆಸಿ 22 ಜನರನ್ನ ರಕ್ಷಿಸಲಾಗಿದೆ. ಇವರಲ್ಲಿ 20 ಜನ ಪುರುಷರು, 15 ಜನ ಮಹಿಳೆಯರು, 25 ಜನ ಮಕ್ಕಳು, ಇಬ್ಬರು ವೃದ್ಧರು ಸೇರಿ ಒಟ್ಟು 62 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಹೊಸಕೋಟೆ ತಹಶೀಲ್ದಾರ್ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಕಂದಾಯ, ಪೊಲೀಸ್ ಇಲಾಖೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, State Adventure Sports, MEG Group ಸಹಕಾರದಿಂದ ನೀರಲ್ಲಿ ಸಿಲುಕಿದ್ದ ಎಲ್ಲರನ್ನು ರಕ್ಷಿಸಲಾಯಿತು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಹೇಶ್ ಕುಮಾರ್ ಜೊತೆ ಸಣ್ಣಕೈಗಾರಿಕೆ ಮತ್ತು ಪೌರಾಢಳಿತ ಸಚಿವ ಎಂಟಿಬಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆ ನಡೆಸಿದ ಎಲ್ಲಾ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ತಿಳಿಸಿ ಕಾರ್ಮಿಕರಿಗೆ ಧೈರ್ಯ ತುಂಬಿದರು.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
Kshetra Samachara
08/09/2022 01:47 pm