ಆನೇಕಲ್ : ಮನುಷ್ಯ ಇಂದು ಸ್ವಾರ್ಥ ಬಿಟ್ಟು ಗಿಡ- ಮರ, ಪ್ರಾಣಿ- ಪಕ್ಷಿ ಸಂಕುಲ ಉಳಿಸಬೇಕಿದೆ. ಮನುಷ್ಯನಲ್ಲಿ ಎರಡು ಜ್ಞಾನ ಅಭಿವೃದ್ಧಿ ಅಗುತ್ತಿದೆ. ಒಂದು ತಂತ್ರಜ್ಞಾನ, ಮತ್ತೊಂದು ಕುತಂತ್ರ ಜ್ಞಾನ. ತಂತ್ರಜ್ಞಾನದಿಂದ ಪ್ರಕೃತಿ ನಾಶವಾಗುತ್ತಿದೆ. ಕುತಂತ್ರದಿಂದ ಮಾನವೀಯತೆ ಮರೆಯಾಗುತ್ತಿದೆ. ಹಾಗಾಗಿ ನಾವು ಪರಿಸರ ಉಳಿಸುವ ಬಗ್ಗೆ ಗಮನ ಕೊಡಬೇಕು ಎಂದು ಸಾಹಿತಿ ನಾಗಲೇಖಾ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೆನ್ನಾಗರ ಗ್ರಾಪಂ ವ್ಯಾಪ್ತಿಯ ಕಾಚನಾಯಕಹಳ್ಳಿ ಪೊಲೀಸ್ ಬಡಾವಣೆಯಲ್ಲಿ ರಾಜಲಾಂಛನ ತಂಡದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಂಡೇಪಾಳ್ಯ ಪೊಲೀಸ್ ಇನ್ಸ್ ಪೆಕ್ಟರ್ ಎಲ್.ವೈ. ರಾಜೇಶ್ ಹಾಗೂ ಮಾಜಿ ಅಧ್ಯಕ್ಷ ಕೇಶವ ರೆಡ್ಡಿ, ರಾಜ ಲಾಂಛನ ತಂಡದ ಶೇಖರ್ ಭಾಗಿಯಾಗಿದ್ದರು.
ಈ ಸಂದರ್ಭ ಇನ್ಸ್ ಪೆಕ್ಟರ್ ಎಲ್. ವೈ. ರಾಜೇಶ್ ಮಾತನಾಡಿ, ಈ ದಿನ 50 ಗಿಡ ನೆಡುತ್ತಾರೆ. ಆದರೆ, ಮತ್ತೆ ಆ ಕಡೆ ತಿರುಗಿ ನೋಡಲ್ಲ! ನಂತರ ಗಿಡ ಏನಾಯಿತು ಅಂತ ಕಾಳಜಿಯೇ ಇರಲ್ಲ. ಆದರೆ, ಇಲ್ಲಿ ಆ ರೀತಿ ಆಗೊಲ್ಲ ಅಂತ ನಂಬಿಕೆಯಿದೆ. ಮಗು ದತ್ತು ಪಡೆದ ರೀತಿಯಲ್ಲೇ ಮಗುವಿನ ಪೋಷಣೆಯ ತರ ಗಿಡ-ಮರಗಳ ಆರೈಕೆ ಮಾಡಬೇಕು ಎಂದರು.
- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
Kshetra Samachara
05/06/2022 01:58 pm