ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮಳೆಯಿಂದ ಭಾರೀ ಅವಾಂತರ !

ಬೆಂಗಳೂರು: ಗ್ರಾಮಂತರ ಭಾಗದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತವರಣವಿದೆ. ಇನ್ನೇನು ಜೋರಾದ ಮಳೆ ಪ್ರಾರಂಭವಾಗುತ್ತದೆ.‌ ಈ ಹಿನ್ನೆಲೆ ಇವತ್ತು ಈ ಗ್ರಾಮಂತರ ಭಾಗದಲ್ಲಿ ಬಾರಿ ಅನಾಹುತಗಳು ಆಗುವ ಮುನ್ಸೂಚನೆಗಳಿವೆ. 3 ದಿನಗಳಿಂದ ಮಳೆಯಿಂದಾಗಿ ಬಾರಿ ಅನಾಹುತಗಳು ಆಗಿದೆ. ಬೆಸ್ಕಾಂ ವಿದ್ಯುತ್ ಕಡಿತಗೊಳಿಸಿದೆ. 3 ದಿನದಿಂದ ಕರೆಂಟ್ ಇಲ್ಲದೆ, ಊರುಗಳಲ್ಲಿ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ.ಕರೆಂಟ್ ಇಲ್ಲದೆ ಓವರ್ ಟ್ಯಾಂಕ್ ಮೋಟರ್‌ ಆನ್ ಮಾಡಲಾಗದೆ, ಟ್ಯಾಂಕರ್ ಗಳಲ್ಲಿ ನೀರು ಬಿಡಿಸುತ್ತಿದ್ದಾರೆ.

ಇಲ್ಲಿಯ ಜನ ನೀರಿಲ್ಲದೇ ಈಗ ಪರದಾಡುತ್ತಿದ್ದದ್ದು ಒಂದು ಕಡೆಯಾಗಿದ್ರೆ, ಮರಗಳು ,ವಿದ್ಯುತ್ ಕಂಬಗಳು ಮನೆಯ ಮೇಲೆ ಬಿದ್ದಿವೆ. ಆದರೆ, ಸದ್ಯಕ್ಕೆ ಸಾರ್ವಜನಿಕರು ಇಲ್ಲಿ ವಾಸವಿಲ್ಲದ ಕಾರಣ ಯಾವುದೆ ಪ್ರಾಣಪಾಯ ಸಂಭವಿಸಿಲ್ಲ. ಇದ್ರಿಂದ ಊರುಗಳಲ್ಲಿ ವಾಹನಗಳು ಸಂಚರಿಸಲಾಗದೇ ಬೇರೆ ಮಾರ್ಗ ಬಳಸುತ್ತಿದ್ದಾರೆ.

ಒಟ್ನಲ್ಲಿ ಒಂದು ದಿನ ಕರೆಂಟ್ ಇಲ್ಲದೆ, ನೀರು ಇಲ್ಲದೆ ಸಿಟಿ ಜನ್ರಿಗೆ ಬದುಕಲು ಆಗೋದಿಲ್ಲ. ಒಂದೇ ಗಂಟೆಯಲ್ಲಿ ಸಿಟಿಯಲ್ಲಿ ಕರೆಂಟ್ ಕಂಬ ರೆಡಿ ಮಾಡುವ ವಿದ್ಯುತ್ ಅಧಿಕಾರಿಗಳು, ಹಳ್ಳಿ ಜನರಿಗೆ ಮಾತ್ರ 3 ದಿನದಿಂದ ಕರೆಂಟ್ ಇಲ್ಲದ ಪರದಾಡುವಂತೆ ಮಾಡಿದ್ದಾರೆ. ಇದಕ್ಕೆ ಯಾವ ಅಧಿಕಾರಿಗಳು ಸಹ ತಲೆಕೆಡಸಿಕೊಂಡಿಲ್ಲ. ವಿಸಿಟ್ ಮಾಡಿ ಹಳ್ಳಿ ಜನರ ಕಷ್ಟನೂ ಕೇಳಿಲ್ಲ.ಇದ್ರಿಂದ ಹಳ್ಳಿ ಜನರು ನೊಂದುಕೊಂಡಿದ್ದಾರೆ.

ರಂಜಿತಾ ಸುನಿಲ್ ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Manjunath H D
Kshetra Samachara

Kshetra Samachara

11/05/2022 08:17 pm

Cinque Terre

6.25 K

Cinque Terre

0

ಸಂಬಂಧಿತ ಸುದ್ದಿ