ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಈ ವರ್ಷ ಇಷ್ಟೊಂದು ಬಿಸಿಲು ಯಾಕೆ ?

ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರ ಬಾಯಲ್ಲೀಗ ಬಿರು ಬಿಸಿಲಿನದ್ದೇ ವಿಷಯ. ಅಬ್ಬಾ, ಎಷ್ಟೊಂದು ಸುಡುವ ಬಿಸಿಲು ಅಂತ ಕಳೆದೊಂದು ತಿಂಗಳಿನಿಂದ ಜನರು ಚಡಪಡಿಸುತ್ತಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಹವಾಮಾನ ಹಿತಕರ ಎಂದು ಹಿಂದಿನಿಂದಲೂ ಕೇಳಿಬರುತ್ತಿರುವ ಮಾತು. ಆದರೆ ಈ ವರ್ಷ ಬೆಂಗಳೂರಿಗರು ಇದುವರೆಗೆ ಕಂಡಿರದಷ್ಟು ಬಿಸಿಲಿನ ಧಗೆಯನ್ನು ಅನುಭವಿಸುತ್ತಿದ್ದಾರೆ. ಮೋಡದ ರಚನೆಯಾಗದೆ ಒಣ ವಾತಾವರಣ ಹೊಂದಿರುವುದು ಈ ವರ್ಷ ಇಷ್ಟೊಂದು ಬಿಸಿಲಿಗೆ ಕಾರಣವೆಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ಸರಾಸರಿ ತಾಪಮಾನ 35 ರಿಂದ 39ಡಿಗ್ರಿ ಸೆಲ್ಸಿಯಸ್ ನಷ್ಟಿದೆ. 1971ರಿಂದ 2000ದವರೆಗೆ ಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಆದರೆ 2016 ರಲ್ಲಿ 39 ಡಿಗ್ರಿ ಸೆಲ್ಸಿಯಸ್ ನಷ್ಟು ಇತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಪ್ರಸಾದ್ ತಿಳಿಸಿದ್ದಾರೆ.

ಇನ್ನು ಕೆಲ ದಿನಗಳಲ್ಲಿ ಹಗುರ ಮಳೆ ಬೀಳಬಹುದು. ಕಳೆದ ವರ್ಷ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಸುಮಾರು ಮಳೆಯಾಗಿತ್ತು. ಹಾಗಾಗಿ ಈ ವರ್ಷದಷ್ಟೇ ಬಿಸಿಲು ಇದ್ದಿದ್ದರೂ ಆಗಾಗ ಮಳೆ ಬೀಳುತ್ತಿದ್ದರಿಂದ ಸೆಖೆಯ ಅನುಭವ ಅಷ್ಟಾಗಿ ಆಗುತ್ತಿರಲಿಲ್ಲ.

ಇನ್ನೇರಡು ದಿನ ಇದೇ ರೀತಿಯ ಬಿಸಿಲು ಇರಲಿದೆ. ಇನ್ನೂ ಉತ್ತರ ಕರ್ನಾಟಕದ ಕಲ್ಬುರ್ಗಿಯಲ್ಲಿ 40-41 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇದೆ. ರಾಯಚೂರು, ಬಳ್ಳಾರಿ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದೆ.

Edited By : Nagesh Gaonkar
PublicNext

PublicNext

27/04/2022 06:45 pm

Cinque Terre

48.05 K

Cinque Terre

2

ಸಂಬಂಧಿತ ಸುದ್ದಿ