ಬೆಂಗಳೂರು: ನಗರದಲ್ಲಿ ಪ್ರತಿದಿನ ಸಂಜೆ ಭಾರೀ ಮಳೆಯಾಗುತ್ತಿದ್ದು, ಜನರು ಮನೆಗಳಿಗೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಏಪ್ರಿಲ್-18 ರ ಸಂಜೆಯೂ ನಗರದಲ್ಲಿ ಸಿಕ್ಕಾಪಟ್ಟೆ ಮಳೆಯಾಗಿದೆ.
ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್, ಬನಶಂಕರಿ, ಬೊಮ್ಮನಹಳ್ಳಿ, ಸೌತೆಂಡ್, ಜಯನಗರ, ಶಿವಾಜಿನಗರ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.
ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಜನರು ಮನೆಗಳಿಗೆ ತೆರಳಲು ಪರದಾಡಿದರು. ಶಿವಾಜಿನಗರ ರಸ್ತೆ ಜಲಾವೃತಗೊಂಡಿದ್ದು, ಕಾರು, ಬೈಕ್‌ಗಳು ಹಾಗೂ ಅಂಗಡಿಗಳ ಒಳಗೆ ನೀರು ನುಗ್ಗಿ ಜಲಾವೃತಗೊಂಡಿತು.
ನವೀನ ಪಬ್ಲಿಕ್ ನೆಕ್ಸ್ಟ್
ಬೆಂಗಳೂರು
Kshetra Samachara
19/04/2022 11:01 am