ಆನೇಕಲ್: ಒಂದೆಡೆ ಜನರು ಯುಗಾದಿ ಹಬ್ಬ ಸಂಭ್ರಮದಲ್ಲಿ ಮುಳುಗಿದ್ದರೆ ಮತ್ತೊಂದು ಕಡೆ ಪ್ರಕೃತಿ ತನ್ನ ಸೊಬಗನ್ನು ಚೆಲ್ಲಿ ಮನುಜರ ಮನ ಸೆಳೆಯುವಂತೆ ಮಾಡುತ್ತಿದೆ...
ವಸಂತಕಾಲದಲ್ಲಿ ಚಿಗುರಿದ ಮಾವಿನ ಮರ, ಅರಳೀ ಮರ, ನೇರಳೆ ಮರ, ಹೊಂಗೆ ಇನ್ನಿತರ ಮರಗಳನ್ನ ನೋಡಿದಾಗ ಮನಸ್ಸಿಗೆ ನೆಮ್ಮದಿಯನ್ನು ಹಾಗೂ ಕಣ್ಣಿಗೆ ತಂಪನ್ನು ಉಂಟು ಮಾಡ್ತಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ ಒಂದನೇ ಹಂತದಲ್ಲಿ ನಾನಾ ಹೂವಿನ ಮರಗಳಿದ್ದು, ಮನ ಸೆಳೆಯುತ್ತಿದೆ. ಈ ಹೂವಿನ ಗಿಡಗಳನ್ನು ಕಣ್ತುಂಬಿಕೊಳ್ಳಲು ಜನ ಆ ಕಡೆ ಮುಖ ಮಾಡುತ್ತಿದ್ದಾರೆ. ಜೊತೆಗೆ ಸುಮ ಸಮೂಹದ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
PublicNext
04/04/2022 07:50 am