ಬೆಂಗಳೂರು: ಭಾನುವಾರ ರಾತ್ರಿ ಸುಮಾರು 2 ಗಂಟೆಗಳ ಸುರಿದ ಭೀಕರ ಮಳೆಗೆ ಬೆಂಗಳೂರು ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರಾತ್ರಿ ಸುಮಾರು 10 ಗಂಟೆಗೆ ಶುರುವಾದ ಮಳೆರಾಯನ ಆರ್ಭಟದಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮೆಜೆಸ್ಟಿಕ್, ಚಾಮರಾಜಪೇಟೆ, ಮಲ್ಲೇಶ್ವರಂ, ರಾಜಾಜಿ ನಗರ ಸುತ್ತಮುತ್ತ ಮಳೆಯಾಗಿದೆ. ಜೊತೆಗೆ ಜಯನಗರ, ಬನಶಂಕರಿ, ಜೆ.ಪಿ ನಗರ, ಮೈಕೋ ಲೇ ಔಟ್ ಸುತ್ತಮುತ್ತಲೂ ಮಳೆ ಸುರಿದಿದೆ.
ಕೊಚ್ಚಿ ಹೋದ ದನಕರು: ರಾಜಕಾಲುವೆ ನೀರು ಏಕಾಏಕಿ ರೈತ ಅಂದಾನಪ್ಪ ಎಂಬುವವರಿಗೆ ಮನೆ ಹಾಗೂ ದನದ ಕೊಟ್ಟಿಗೆ ನುಗ್ಗಿದೆ. ಪರಿಣಾಮ 5 ಹಸು, 6 ಮೇಕೆಗಳು ಕೊಚ್ಚಿ ಹೋಗಿವೆ. ಇನ್ನು ಮಳೆಗೆ ಸ್ಥಳದಲ್ಲೇ 1 ಹೋರಿ, 1 ಎಮ್ಮೆ ಹಾಗೂ 1 ಕರು ಸಾವನ್ನಪ್ಪಿವೆ. ಇನ್ನು ಮನೆಯಲ್ಲಿದ್ದ ಸುಮಾರು 30 ಮೂಟೆ ಇಂಡಿ ಬೂಸ ಮಳೆಗೆ ಸಂಪೂರ್ಣ ಹಾನಿಯಾಗಿದೆ.
ಕಷ್ಟಪಟ್ಟು ಸಾಲ ಮಾಡಿ ದನಗಳನ್ನ ಸಾಕಿದ್ವಿ. ನಮಗೆ ಇದೇ ಜೀವನ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ. ನಮ್ಮ ಬದುಕೇ ಮುಗ್ದೋಯ್ತು ಅನಿಸ್ತಿದೆ ಎಂದು ಆರ್.ಆರ್.ನಗರದಲ್ಲಿ ರೈತರು ಕಣ್ಣೀರು ಇಟ್ಟಿದ್ದಾರೆ.
Kshetra Samachara
04/10/2021 11:10 am