ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಂಟಿ ಸಲಗ ಪ್ರತ್ಯಕ್ಷ- ಜನರಲ್ಲಿ ಹೆಚ್ಚಿದ ಆತಂಕ

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಂಡ್ಲವಾಡಿ ಸಮೀಪದ ಚೂಡಹಳ್ಳಿ ಗ್ರಾಮದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.

ಇಲ್ಲಿನ ಚೂಡಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ರಸ್ತೆ ದಾಟುವಾಗ ಸ್ಥಳೀಯ ಮೊಬೈಲ್‌ನಲ್ಲಿ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಇನ್ನು ಒಂಟಿ ಸಲಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಊರಿನ ಗ್ರಾಮಸ್ಥರು ಹೊಲಗಳಿಗೆ ಕುರಿ ಮತ್ತು ಹಸು ಮೇಯಿಸಲು ಹೋಗುವ ಜನರಿಗೆ ಆತಂಕ ಮನೆಮಾಡಿದೆ. ಕಾಡಾನೆ ಬಗ್ಗೆ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕ, ತಮಿಳುನಾಡು ಗಡಿಭಾಗದ ಹೊಸೂರು ಸಮೀಪದ ಶಾಣಮಾವು ಅಂಚೆಟ್ಟಿ ಅಂದುಕೊಂಡಿರುವ ಕಾಡು ಪ್ರದೇಶ ಆದ್ರಿಂದ ಕಾಡಾನೆಗಳು ಹಳ್ಳಿ ಕಡೆ ಮುಖ ಮಾಡುತ್ತೇವೆ.. ಇನ್ನು ಈ ಹಿಂದೆ ಹೊಸೂರು ಸಮೀಪದ ಶಾನಮಾವು ಅರಣ್ಯದಲ್ಲಿ ಬೀಡು ಬಿಟ್ಟಿದ್ದ 50ಕ್ಕೂ ಹೆಚ್ಚು ಕಾಡಾನೆಗಳನ್ನು ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಅರಣ್ಯ ಪ್ರದೇಶಕ್ಕೆ ಓಡಿಸಲಾಗಿತ್ತು. ಉಳಿದ ಕಾಡಾನೆಗಳು ಪ್ರಸ್ತುತ ಪರೇಂಡಪಲ್ಲಿ ಅರಣ್ಯದಲ್ಲಿ ಬೀಡುಬಿಟ್ಟಿವೆ...

Edited By :
Kshetra Samachara

Kshetra Samachara

30/05/2022 07:56 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ