ದೊಡ್ಡಬಳ್ಳಾಪುರ: ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ನೀರು ಸಿಗುವುದು ಕಷ್ಟ. ಮೂಕ ಪ್ರಾಣಿಗಳ ಹಸಿವು ಮತ್ತು ಬಾಯಾರಿಕೆ ತಣಿಸಲು ಮೂರು ಧರ್ಮಗಳು ಕೈಜೋಡಿಸಿವೆ. ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಪ್ರತಿ ದಿನ 5 ಸಾವಿರಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುತ್ತಿದೆ.
ದೊಡ್ಡಬಳ್ಳಾಪುರ ನಗರಸಭೆ ಸದಸ್ಯ ಎಂ.ಮುನಿರಾಜು ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ವಿಶೇಷವಾದ ಪ್ರೀತಿ, ಕಳೆದ ಹತ್ತು ವರ್ಷಗಳಿಂದ ತಾಲೂಕಿನ ಘಾಟಿ ಸುಬ್ರಮಣ್ಯ ಬಳಿಯ ಅರಣ್ಯ ಪ್ರದೇಶದಲ್ಲಿ ಕೋತಿಗಳಿಗೆ ಹಣ್ಣುಗಳು ಕೊಟ್ಟು ಬರುತ್ತಿದ್ದರು. ಪ್ರಾಣಿಗಳ ಹಸಿವು ನೀಗಿಸಲು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದ ಅವರು ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಅಡಿ ಮೂರು ಧರ್ಮಗುರುಗಳ ಜೊತೆಯಲ್ಲಿ ಪ್ರಾಣಿ ಪಕ್ಷಿಗಳ ಹಸಿವು ನೀಗಿಸುತ್ತಿದ್ದಾರೆ. ಪ್ರತಿ ನಿತ್ಯ 5 ಸಾವಿರಕ್ಕೂ ಹೆಚ್ಚು ಕೋತಿ, ಹಸುಗಳಿಗೆ ಆಹಾರ ನೀಡಲಾಗುತ್ತಿದೆ. ಅಲ್ಲದೆ ತಾಲೂಕಿನ ವಿವಿಧೆಡೆಗಳಲ್ಲಿ 80 ನೀರಿನ ತೊಟ್ಟಿ ನಿರ್ಮಿಸಿ, ಪ್ರಾಣಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಪ್ರಾಣಿ ಪಕ್ಷಿಗಳ ಸೇವೆಯಲ್ಲಿ ಒಂದು ವರ್ಷ ಪೂರೈಸಿದ್ದು ಮೊದಲ ವಾರ್ಷಿಕೋತ್ಸವವನ್ನು ನಗರ ರಂಗಪ್ಪ ಸರ್ಕಲ್ ಆಚರಿಸಲಾಯಿತು.
PublicNext
03/03/2022 11:35 am