ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಳೆ ಅವಾಂತರ ತಪ್ಪಿಸಲು 8 ವಲಯಗಳಲ್ಲಿ ಸಚಿವರ ನೇತೃತ್ವದಲ್ಲಿ ಬೃಹತ್ ಕಾರ್ಯ..!

ಬೆಂಗಳೂರು : ಮಳೆ ಅನಾಹುತ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕಾರ್ಯಪಡೆ ನೇತೃತ್ವದ ವಿವರ ಇಂತಿದೆ.

ಆರ್ ಅಶೋಕ್- ದಕ್ಷಿಣ ವಲಯ

ಡಾ.ಅಶ್ವಥ್ ನಾರಾಯಣ್- ಪೂರ್ವ ವಲಯ

ವಿ ಸೋಮಣ್ಣ- ಪಶ್ಚಿಮ ವಲಯ

ಎಸ್ ಟಿ ಸೋಮಶೇಖರ್ -ಆರ್ ಆರ್ ನಗರ ವಲಯ

ಬೈರತಿ ಬಸವರಾಜ್- ಮಹದೇವಪುರ ವಲಯ

ಗೋಪಾಲಯ್ಯ -ಬೊಮ್ಮನಹಳ್ಳಿ ವಲಯ

ಮುನಿರತ್ನ -ಯಲಹಂಕ ಮತ್ತು ದಾಸರಹಳ್ಳಿ ವಲಯ

ಇನ್ನೂ ಇವರುಗಳು ತಂಡವಾಗಿ ಅವರವರ ವಲಯಗಳಲ್ಲಿ ಏನೆಲ್ಲ ಸಮಸ್ಯೆಗಳು ಬರುತ್ತದೆಯೊ ಅದಕ್ಕೆಲ್ಲಾ ಮುಕ್ತಿ ಕೊಡುವ ಕೆಲಸ ಮಾಡಲಿದ್ದರೆ.ಮಳೆಹಾನಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅದಕ್ಕೆ ಬೇಕಾದ ಸೂಕ್ತ‌ ಕ್ರಮ ತೆಗೆದುಕೊಂಡು ಮುಂಬುರುವ ಮಳೆಯ ದಿನಗಳಲ್ಲಿ ಯಾವ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Edited By : Manjunath H D
PublicNext

PublicNext

22/05/2022 07:41 pm

Cinque Terre

55.21 K

Cinque Terre

0

ಸಂಬಂಧಿತ ಸುದ್ದಿ