ಕಮಿಷನರ್ ಕಚೇರಿ: ನಗರದ ಹೊರವಲಯದ ಸಾದಹಳ್ಳಿ ಜೇಡ್ ವಿಲ್ಲಾ ರೇವ್ ಪಾರ್ಟಿ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಇಷ್ಟಕ್ಕೂ ಆ ರೇವ್ ಪಾರ್ಟಿ ಪ್ರಕರಣದಲ್ಲಿ ಲಾಕ್ ಆದವರರು ಎಲ್ರೂ ಆಗರ್ಭ ಶ್ರೀಮಂತರೇ.
ರೇವ್ ಪಾರ್ಟಿ ರೇಡ್ ಪ್ರಕರಣದಲ್ಲಿ ಬಂಧಿಯಾಗಿರೋ 6 ಆರೋಪಿಗಳ ಪೈಕಿ ಅಂಕಿತ್ ಜೈನ್ ಸೇರಿದಂತೆ ಮತ್ತೋರ್ವ ಆರೋಪಿಯನ್ನ ಸಿಸಿಬಿ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಸಿಸಿಬಿ ವಶಕ್ಕೆ ಪಡೆದಿರುವ ಪ್ರಮುಖ ಆರೋಪಿ ಅಂಕಿತ್ ಜೈನ್ ಹಾಗೂ ಮರ್ತೋರ್ವ ಆರೋಪಿಗೆ ಸಿಸಿಬಿ ಪೊಲೀಸರು ಅಜ್ಙಾತ ಸ್ಥಳದಲ್ಲಿರಿಸಿ ಡ್ರಿಲ್ ನಡೆಸ್ತಿದ್ದಾರೆ.
ಸದ್ಯ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಬಳ್ಳಾರಿ ಮೂಲದ ಉದ್ಯಮಿ ಅಂಕಿತ್ ಜೈನ್ ಸೇರಿದಂತೆ ಮತ್ತೋರ್ವ ಆರೋಪಿಯನ್ನು ವಶಕ್ಕೆ ಪಡೆದು ಗ್ರಿಲ್ ನಡೆಸ್ತಿದ್ದು, ಈ ಹಿಂದೆ ಇದೇ ಮಾದರಿಯ ರೇವ್ ಪಾರ್ಟಿ ಗಳನ್ನ ಆಯೋಜಿಸಿರುವ ಸಾಧ್ಯತೆ ಇದೆ.
PublicNext
19/09/2022 01:14 pm