ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ ಮೂರು ದಿನವಷ್ಟೆ ಬಾಕಿ ಇದೆ. ಹೀಗಾಗಿ ನಗರದಲ್ಲಿ ಬಂದೋಬಸ್ತ್‌ಗೆ ಬಾರಿ ಪ್ಲಾನ್ ನಡೆಯುತ್ತಿದೆ. ಮೂರು ರೀತಿ ಕ್ಯಾಟಗರಿ ಪೊಲೀಸರ ನಿಯೋಜನೆ ಮಾಡಿದ್ದಾರೆ. ಗಣೇಶ ಕೂರಿಸಲು ಮೂರು ರೀತಿ ಪ್ರದೇಶವನ್ನ ಪೊಲೀಸರು ಗುರುತಿಸಿದ್ದಾರೆ.
ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಏರಿಯಾಗಳು ಎಂದು ಪೊಲೀಸರು ಗುರುತಿಸಿದಾರೆ. ಪಶ್ಚಿಮ ವಿಭಾಗದಲ್ಲಿ ಚಾಮರಾಜಪೇಟೆ ಹಾಗೂ ಚಂದ್ರಲೇಔಟ್ ಸೂಕ್ಷ್ಮ ಪ್ರದೇಶ ಎಂದು ಗುರುತು ಮಾಡಿದ್ದಾರೆ. ಇನ್ನು ಪೂರ್ವ ವಿಭಾಗದಲ್ಲಿ ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ, ಗೋವಿಂದಪುರ ಸೂಕ್ಷ್ಮ ಪ್ರದೇಶ ಎಂದು ಗುರುತು ಮಾಡಿದ್ದಾರೆ. ಇಂತಹ ಏರಿಯಾಗಳಲ್ಲಿ ಪೊಲೀಸರ ಹದ್ದಿನ ಕಣ್ಣು ಇಟ್ಟಿದ್ದಾರೆ.
ದಿನದ 24 ಗಂಟೆಯೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು,ಮೂರು ಪಾಳಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವ ಪಟ್ಟಿ ತಯಾರಿಸಿ ಪರಿಶೀಲನೆ ಮಾಡಲಾಗಿದೆ.ಚಾಮರಾಜಪೇಟೆ, ಜೆ.ಜೆ ನಗರ, ಡಿ ಜೆ ಹಳ್ಳಿ, ಕೆ ಜಿ ಹಳ್ಳಿ, ಎಸ್ ಜಿ ಪಾಳ್ಯ, ವಿವೇಕನಗರ, ತಿಲಕನಗರ, ಬನಶಂಕರಿ, ಆರ್ ಟಿ ನಗರ, ಜೆ ಸಿ ನಗರ ಏರಿಯಾಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ.ಗಣೇಶ ಹಬ್ಬದಂದು ಈ ಏರಿಯಾಗಳಲ್ಲಿ ಕಟ್ಟೇಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
ಸೂಕ್ಷ್ಮ ಏರಿಯಾ ಇನ್ಸ್‌ಪೆಕ್ಟರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಿದೆ.ಸೂಕ್ಷ್ಮ ಏರಿಯಾಗಳಲ್ಲಿ ಪೊಲೀಸರ ಮೂರನೇ ಕಣ್ಣಿಟ್ಟಿದ್ದಾರೆ. ಏರಿಯಾಗಳ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿದ್ದು, ಗಣೇಶೋತ್ಸವ ಆಯೋಜಕರ ಜೊತೆ ಮೀಟಿಂಗ್ ಮಾಡಿ ಮೆರವಣಿಗೆ ಬಗ್ಗೆ ಮಾಹಿತಿ ಪಡೆಯುವಂತೆ ಸೂಚನೆ ನೀಡಲಾಗಿದೆ.ಎರಡು ದಿನದಲ್ಲಿ ಸೂಕ್ಷ್ಮ ಪ್ರದೇಶಗಳ ಮೆರೆವಣಿಗೆಯ ಬ್ಲೂ ಪ್ರಿಂಟ್ ರೆಡಿ ಮಾಡಲು ಜೊತೆಗೆ ಮೆರವಣಿಗೆ ವೇಳೆ ಎರಡು ಡ್ರೋಣ್ ಕ್ಯಾಮೆರಾ ಬಳಸಲು ಕಮಿಷನರ್ ಸೂಚನೆ ನೀಡಿದ್ದಾರೆ.
Kshetra Samachara
28/08/2022 03:50 pm