ಬೆಂಗಳೂರು: 75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವಕ್ಕೆ ರಾಜ್ಯದ ಎಲ್ಲಾ ಐತಿಹಾಸಿಕ ಸ್ಥಳಗಳಿಗೂ ಸರ್ಕಾರ ಕೇಸರಿ, ಬಿಳಿ, ಹಸಿರು ಬಣ್ಣದ ದೀಪಾಲಂಕಾರ ಮಾಡಿದೆ. ಅದರಲ್ಲೂ ಬೆಂಗಳೂರಿನ ವಿಧಾನಸೌಧ ಮತ್ತು ಟಿಪ್ಪು ಅರಮನೆಯ ದೀಪಾಲಂಕಾರ ಜನಮನ ಸೆಳೆಯುತ್ತಿತ್ತು.
ವಿಧಾನಸೌಧದ ದೀಪಾಲಂಕಾರ ನೋಡಲು ಮಧ್ಯರಾತ್ರಿಯಾದರೂ ಜನಸಂದಣಿ ಹೆಚ್ಚಾಗಿತ್ತು. ಮಧ್ಯರಾತ್ರಿ ಪೊಲೀಸರ ಭದ್ರತೆಯಿಲ್ಲದೆ ಜನ ಬೇಕ ಬಿಟ್ಟಿ ವಿಧಾನಸೌಧ ಮುಂದೆ ಫೋಟೊ ಕ್ಲಿಕ್ಕಿಸಲು ಮುಂದಾಗಿದ್ದರು. ಇದರಿಂದ ವಿಧಾನಸೌಧ ಮುಂದೆ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಇಷ್ಟೊಂದು ಜನರು ಬಂದಿರುವ ಸುಳಿವು ಪೊಲೀಸರಿಗೆ ಇರಲಿಲ್ಲ ಎನ್ನುವುದೇ ವಿಪರ್ಯಾಸದ ಸಂಗತಿ. ಇನ್ನೂ ಈ ಸಮಯವನ್ನ ಕಿಡಿಗೇಡಿಗಳು ದುರುಪಯೋಗ ಮಾಡಿಕೊಂಡಿದ್ದರೆ ದೊಡ್ಡ ಅನಾಹುತವೇ ಆಗ್ತಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗದಿರಲಿ ಎನ್ನುವುದು ಸಾರ್ವಜನಿಕರ ವಿನಂತಿ.
PublicNext
15/08/2022 11:23 am