ಎಣ್ಣೆ ಮತ್ತಲ್ಲಿ ಬಂದು ನನ್ನನ್ನು ಪೆಟ್ರೋಲ್ ನಿಂದ ಸುಟ್ಟು, ಚಾಕುವಿನಿಂದ ಇರಿದಿದ್ದಾರೆ ಎಂದು ಠಾಣೆ ಮುಂದೆ ವ್ಯಕ್ತಿಯೋರ್ವ ಕಿರಿಕ್ ಮಾಡಿರುವ ಘಟನೆ ಗೋವಿಂದಪುರ ಠಾಣೆ ಮುಂದೆ ನಡೆದಿದೆ.
ಇಮ್ರಾನ್ ಎಂಬ ಯುವಕ ಈ ರೀತಿ ಹೈಡ್ರಾಮ ಮಾಡಿರುವಾತ. ಈತ ಪ್ಲಾಸ್ಟಿಕ್ ಕವರ್ ನಲ್ಲಿ ಪೆಟ್ರೋಲ್ ಹಾಗೂ ಚಾಕು ಹಿಡಿದು ಠಾಣೆಗೆ ಬಂದು ನನಗೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದಾರೆ ಚಾಕುವಿನಿಂದ ಇರಿದು ಕೊಲ್ಲಲ್ಲು ಬಂದಿದ್ದಾರೆ ಎಂದು ಸೀನ್ ಕ್ರಿಯೆಟ್ ಮಾಡಿದ್ದಾನೆ.
ಸದ್ಯ ಠಾಣೆ ಮುಂದೆ ಹೈಡ್ರಾಮ ಮಾಡ್ತಿದ್ದ ಇಮ್ರಾನ್ ವಶಕ್ಕೆ ಪಡೆದಿರುವ ಗೋವಿಂದಪುರ ಪೊಲೀಸರು ಇಮ್ರಾನ್ ಬಳಿ ಇದ್ದ ಚಾಕುವನ್ನು ಸೀಜ್ ಮಾಡಿದ್ದಾರೆ. ಮೈಮೇಲೆ ಚಾಕುವಿನಿಂದ ಸಣ್ಣದಾಗಿ ಪರಚಿಕೊಂಡು ಇಮ್ರಾನ್ ಉದ್ದೇಶ ಪೂರ್ವಕವಾಗಿ ಹೈಡ್ರಾಮ ಮಾಡಿದ್ದ ಎಂದು ಹೇಳಲಾಗ್ತಿದೆ.ಗಾಂಜಾ ಮತ್ತಲ್ಲಿ ಕಿರಿಕ್ ಮಾಡ್ತಿರುವ ಶಂಕೆ ವ್ಯಕ್ತವಾಗಿದ್ದು ಮೆಡಿಕಲ್ ಟೆಸ್ಟ್ ಕೂಡ ಮಾಡಿಸಿದ್ದಾರೆ.
Kshetra Samachara
11/04/2022 03:09 pm