ಬೆಂಗಳೂರು: ಕಳೆದ ಕೆಲವು ದಿನಗಳಿಂದಲೂ ಸುರಿಯುತ್ತಿರುವ ಭಾರಿ ಮಳೆಗೆ ಯಲಹಂಕ ತಾಲೂಕು ಸಿಂಗನಾಯಕನಹಳ್ಳಿ ಕೆರೆ ತುಂಬಿ ಹರಿಯುತ್ತಿದೆ. ಜೊತೆಗೆ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅವಾಂತರಗಳಾಗಿವೆ.
ಇನ್ನು, ಕೆರೆಗೆ ಹೊಂದಿಕೊಂಡೇ ಯಲಹಂಕ ತಾಲೂಕು ಅರಣ್ಯ ಇಲಾಖೆಗೆ ಸೇರಿದ ಒಂದು ಎಕರೆ ಪ್ರದೇಶದಲ್ಲಿ ನರ್ಸರಿ ಇದೆ. ಈ ನರ್ಸರಿಯಲ್ಲಿ ಬಳ್ಳಾರಿ ಜಿಲ್ಲೆ ಕುಡ್ಲಗಿಯ ಬಸಣ್ಣ ಎಂಬ ದಿನಗೂಲಿ ಕಾರ್ಮಿಕರ ಕುಟುಂಬ ವಾಸ ಮಾಡ್ತಿದೆ. ನಾಲ್ಕು ವರ್ಷಗಳಿಂದಲೂ ಬಸಣ್ಣ ಇದೇ ನರ್ಸರಿ ಮನೆಯಲ್ಲಿ ಹೆಂಡತಿ- ಇಬ್ಬರು ಮಕ್ಕಳು, ಮೊಮ್ಮಕ್ಕಳ ಜೊತೆ ವಾಸಿಸುತ್ತಿದ್ದರು.
ಆದರೆ, ನಾಲ್ಕು ದಿನಗಳ ಹಿಂದೆ ಬಿದ್ದ ಭಾರಿ ಮಳೆಗೆ ಬಸಣ್ಣ ಮನೆಗೆ ಕೆರೆನೀರು ನುಗ್ಗಿ ದವಸ ಧಾನ್ಯ, ಬಟ್ಟೆಬರೆ ನೀರುಪಾಲಾಗಿದ್ದವು. ಇದರಿಂದ ಅಕ್ಕಪಕ್ಕದ ಜನ ಬಸಣ್ಣ ಕುಟುಂಬಕ್ಕೆ ನೆರವಾಗ್ತಿದ್ದಾರೆ. ಅದರಲ್ಲೂ ಯಲಹಂಕ ತಾಲೂಕಿನ "ಹಸಿರೇ ಉಸಿರು ಬಳಗ" ಕಳೆದ ಮೂರು ವರ್ಷಗಳಿಂದ ಬಸಣ್ಣ ಅವರ ಬಳಿಯೇ ಗಿಡಗಳನ್ನು ಪಡೆದು ನೆಡುವ ಕೆಲಸ ಮಾಡ್ತಿದ್ದಾರೆ. ಇದೀಗ "ಹಸಿರೇ ಉಸಿರು ಬಳಗ" ಬಸಣ್ಣನವರ ಕುಟುಂಬಕ್ಕೆ ಅಕ್ಕಿ, ದವಸ ಧಾನ್ಯ ನೀಡಿ ಗೌರವ ಸಲ್ಲಿಸಿದೆ.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ
Kshetra Samachara
17/07/2022 08:28 pm