ಬೆಂಗಳೂರು: ರಾಜ್ಯದಲ್ಲಿ ಸದ್ಯ ಭ್ರಷ್ಟಾಚಾರ ನಿಗ್ರಹ ಅನ್ನೋದು ಸದ್ಯಕ್ಕೆ ನಿಂತ ನೀರಾಗಿದೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಮಾಡಿ ಕೋರ್ಟ್ ಆದೇಶ ಹೊರಡಿಸಿ ತಿಂಗಳಾದರೂ ಸರ್ಕಾರದ ಆಮೆಗತಿ ಆಡಳಿತದಿಂದ ಭ್ರಷ್ಟರೆಲ್ಲ ಬೆಚ್ಚಗಿದ್ದಾರೆ.
ಸರ್ಕಾರದ ಈ ಧೋರಣೆಯಿಂದ ರಾಜ್ಯದಲ್ಲಿ ಸದ್ಯ ಭ್ರಷ್ಟಾಚಾರ ನಡೆದರೆ ಹೇಳೋರು ಕೇಳೋರು ಯಾರು ಇಲ್ಲ. ಅಷ್ಟೇ ಯಾಕೆ ಭ್ರಷ್ಟಾಚಾರ ಮಾಡಿ ಕೋರ್ಟ್ ನಲ್ಲಿರುವ ಕೇಸ್‌ಗಳನ್ನು ಸದ್ಯ ಯಾರು ಕೇಳುವಂತಿಲ್ಲ.
ಹೌದು. ಈಗಾಗಲೇ ಎಸಿಬಿ ರದ್ದು ಮಾಡಿ ಕೋರ್ಟ್ ಆದೇಶ ಬಂದು ತಿಂಗಳು ಕಳೆದಿದೆ. ಆದರೆ ಸರ್ಕಾರ ಮಾತ್ರ ಇದರ ಬಗ್ಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಮಾಡಬೇಕಾದ ಎಸಿಬಿಯೂ ಇಲ್ಲದೆ ಇತ್ತ ಲೋಕಾಯುಕ್ತವೂ ಇಲ್ಲದೆ ಭ್ರಷ್ಟಾಚಾರ ನಿಯಂತ್ರಣ ಅನ್ನೋದು ನಿಂತ ನೀರಂತಾಗಿದೆ.
ಎಸಿಬಿ ದಾಳಿ ಮಾಡಿ ದಾಖಲಿಸಿದ್ದ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕೋರ್ಟ್ ನಲ್ಲಿ ಟ್ರಯಲ್‌ನಲ್ಲಿವೆ. ಈಗಗಾಲೇ ಎಸಿಬಿ ರದ್ದಾಗಿದ್ದು ಎಸಿಬಿ ಈ ಬಗ್ಗೆ ತಲೆ ಕೆಡಿಸಿಕೊಳ್ತಾ ಇಲ್ಲ. ಇತ್ತ ಸರ್ಕಾರ ಅಧಿಸೂಚನೆ ಹೊರಡಿಸದ ಕಾರಣ ಲೋಕಾಯುಕ್ತವೂ ಇದರ ಬಗ್ಗೆ ತಲೆ ಹಾಕುತ್ತಿಲ್ಲ. ಹೀಗಾಗಿ ಕೋರ್ಟ್ ನಲ್ಲಿ ಟ್ರಯಲ್‌ನಲ್ಲಿ ಇರುವ ಕೇಸ್ ಗಳು ಅಡ್ಡಕತ್ತರಿಯಲ್ಲಿ ಬಿದ್ದಿವಿ ಇದ್ರಿಂದಾಗಿ ಘಟಾನುಘಟಿ ಭ್ರಷ್ಟರಿಗೆಲ್ಲ ರಿಲ್ಯಾಕ್ಸ್ ಸಿಗ್ತಾ ಇದೆ. ಈಗಾಗಲೇ ಬೆಂಗಳೂರು ಮಾಜಿ ಡಿಸಿ ಬಂಧನ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೆ. ಇತ್ತ ಶಾಸಕ ಜಮೀರ್ ಆಹ್ಮದ್ ಖಾನ್ ಮೇಲಿನ ದಾಳಿಯು ನಿಂತಲ್ಲೆ ನಿಂತಿದೆ.
ಸದ್ಯ 600ಕ್ಕೂ ಹೆಚ್ಚು ಸಿಬ್ಬಂದಿ ಇರುವ ಎಸಿಬಿ ಖಾಲಿ ಕೂತಿದ್ದರೆ. ಇತ್ತ ಸರ್ಕಾರದ ಅಧಿಸೂಚನೆ ಹೊರಡಿಸದೇ ಲೋಕಾಯುಕ್ತವೂ ಸುಮ್ಮನೆ ಇದೆ. ಹೀಗಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ನೋದು ಇದ್ದು ಇಲ್ಲದಂತಾಗಿದೆ.
PublicNext
09/09/2022 10:59 pm