ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 40ಕ್ಕಿಂತ ಹೆಚ್ಚು ಸಬ್ ರಿಜಿಸ್ಟ್ರಾರ್‌ಗಳಿಗೆ ನೊಟೀಸ್ ಜಾರಿ ಮಾಡಿದ ಲೋಕಾಯುಕ್ತ

ಬೆಂಗಳೂರು: ಇತ್ತೀಚೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗ್ತಿದೆ ಅಂತ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ಕಳೆದ ಜೂನ್‌ 22ರಂದು ಲೋಕಾಯುಕ್ತ ನ್ಯಾ.ಬಿ‌.ಎಸ್.ಪಾಟೀಲ್ ನೇತೃತ್ವದಲ್ಲಿ ಎಸ್ಪಿ ತಂಡ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗೆ ಒಳಪಡುವ 43 ಉಪನೋಂದಣಿ ಕಚೇರಿಗಳ ಮೇಲೆ‌ ಏಕಾಏಕಿ ತೆರಳಿ ಪರಿಶೀಲನೆ ನಡೆಸಿತ್ತು. ತಪಾಸಣೆ ವೇಳೆ ಅಕ್ರಮ ಎಸಗಿರುವುದು ಕಂಡುಬಂದಿದೆ. ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಿಜಿಸ್ಟ್ರಾರ್ ಹಾಗೂ ಸಬ್ ರಿಜಿಸ್ಟ್ರಾರ್ ಗಳಿಗೆ ಸೆಪ್ಟೆಂಬರ್ 9ರೊಳಗೆ ಉತ್ತರಿಸುವಂತೆ ಲೋಕಾಯುಕ್ತರು ಆದೇಶಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇಸಿ ಸರ್ಟಿಫಿಕೇಟ್ ವಿಳಂಬ, ಅಕ್ರಮವಾಗಿ ಜಮೀನು ಪರಭಾರೆ, ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ, ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಹೆಚ್ಚು ಹಣ ವಸೂಲಿ ಸೇರಿದಂತೆ ನಾನಾ ರೀತಿಯ ದೂರುಗಳ ಸರಮಾಲೆಯೇ ಲೋಕಾಯುಕ್ತಕ್ಕೆ ಬಂದಿತ್ತು‌.‌ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಲೋಕಾಯುಕ್ತರ ತಂಡ 40ಕ್ಕಿಂತ ಹೆಚ್ಚು ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ರು.

ಪರಿಶೀಲನೆ ವೇಳೆ ಇ.ಸಿ ಸರ್ಟಿಫೀಕೆಟ್ ನೀಡುವಲ್ಲಿ ವಿಳಂಬ, ಸಾರ್ವಜನಿಕರಿಂದ ಮದ್ಯವರ್ತಿಗಳು ಹಣ ಪಡೆದಿರುವುದು ಕಂಡುಬಂದಿದೆ. ಕೆಲಸ ಅವಧಿಯಲ್ಲಿ ಸಿಬ್ಬಂದಿ ಐಡಿ ಕಾರ್ಡ್ ಧರಿಸದಿರುವುದು, ಹಾಜರಾತಿ ಪುಸ್ತಕ ಸಹಿ ಹಾಕದಿರುವುದು, ಶುಲ್ಕವಾಗಿ ಪಡೆದ ಹಣದ ಬಗ್ಗೆ ಸೂಕ್ತ ಲೆಕ್ಕಪತ್ರ ಇಲ್ಲದಿರುವುದು ಕಂಡುಬಂದಿದೆ. ಕಚೇರಿಗಳಲ್ಲಿ‌ ಸಿಸಿಸಿವಿ ಅಳವಡಿಸದಿರುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿರುವ ಲೋಕಾಯುಕ್ತರು ಸಂಬಂಧಿಸಿದ‌ ಅಧಿಕಾರಿಗಳಿಗೆ ಉತ್ತರಿಸುವಂತೆ ಸೆಪ್ಟೆಂಬರ್ 9ರೊಳಗೆ ಗಡುವು ವಿಧಿಸಿ ಆದೇಶಿಸಿದ್ದಾರೆ.

Edited By : Nagaraj Tulugeri
PublicNext

PublicNext

19/07/2022 06:12 pm

Cinque Terre

16.75 K

Cinque Terre

1

ಸಂಬಂಧಿತ ಸುದ್ದಿ