ಬೆಂಗಳೂರು:ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದ ಉದ್ಯಮಿ ಮೋಹನ್ ದಾಸ್ ಪೈ ರವರು ಸಾಬೀತು ಮಾಡಲಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿರುಗೇಟು ನೀಡಿದ್ದಾರೆ.
ಬೆಂಗಳೂರಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರ್ವಜನಿಕ ರಂಗದಲ್ಲಿ ಇರುವ ಮೋಹನ್ ದಾಸ್ ಪೈ ಅವರು, ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆ ನೀಡಬೇಕು. ಸೂಕ್ತ ಆಧಾರ ನೀಡಿದ್ರೆ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದರು.
ಇನ್ನೂ ಬಿಬಿಎಂಪಿ ಭ್ರಷ್ಟಾಚಾರ ಮಿತಿ ಮೀರಿದೆ. ಎಂಜಿನೀಯರ್ ಹಾಗೂ ಅಧಿಕಾರಿ ಲಂಚ ಲಂಚ ಎಂದು ಸಾಯ್ತಾರೆ ಎಂದು ಉದ್ಯಮಿ ಮೋಹನ್ ದಾಸ್ ಪೈ ದೂರಿದ್ದರು.
PublicNext
27/04/2022 04:16 pm