ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಠ್ಯ ಪುಸ್ತಕ ಸಮಿತಿಗೆ ಸ್ವತಂತ್ರ್ಯವಾಗಿ ಕೆಲಸ ಮಾಡುವ ಹಕ್ಕು ನೀಡಬೇಕು,: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್

ಬೆಂಗಳೂರು: ಪಠ್ಯ ಪರಿಷ್ಕರಣ ಸಮಿತಿಯನ್ನು ಹೊಸದಾಗಿ ರಚಿಸಬೇಕು ಮತ್ತು ಅದನ್ನು ನ್ಯಾಯಾಂಗದ ರೀತಿಯಲ್ಲಿ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಹಕ್ಕು ನೀಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಪಠ್ಯ ಪರಿಷ್ಕರಣೆ ಕುರಿತು ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ನಾಗಮೋಹನ್ ದಾಸ್ ಸ್ವಾತಂತ್ಯದ ನಂತರ ಶಿಕ್ಷಣದಲ್ಲಿ ಮುಕ್ಯವಾಗಿ ಕಾಣುತ್ತಿರುವ ಕುರತೆ ಗುಣಾತ್ಮಕ ಮತ್ತು ಸಕಾರಾತ್ಮಕ ಶಿಕ್ಷಣ. ಅದರಲ್ಲೂ ಮುಖ್ಯವಾಗಿ ಗುಣಾತ್ಮಕ ಶಿಕ್ಷಣದ ಕುರಿತು ಇಂದು ಚರ್ಚೆ ಮಾಡುವ ಅಗತ್ಯ ಇದೆ. ಇದನ್ನು ಮಾಡುವ ಹಾದಿಯಲ್ಲಿ ಪಠ್ಯ ಪುಸ್ತಕಗಳು ನೈಜ್ಯತೆ ಮತ್ತು ಸಮತೋಲನದ ವಿಷಯಗಳನ್ನು ಒಳಗೊಳ್ಳಬೇಕು. ಅದಕ್ಕೆ ಅದನ್ನು ರಚಿಸುವ ಸಮಿತಿ ಸ್ವಾತಂತ್ಯವಾಗಿದ್ದು ಮತ್ತು ವಿಷಯಾಧಾರಿತ ಮನಸ್ಥಿತಿಯಿಂದ ಹೊರಗಿಡಬೇಕು. ಅದಕ್ಕಾಗಿ ನ್ಯಾಯಾಂಗದ ರೀತಿಯಲ್ಲಿ ಪಠ್ಯ ಪಸ್ತಕ ಪರಿಷ್ಯಕರಣೆ ಸಮಿತಿಯನ್ನು ಸ್ವಾತಂತ್ರ್ಯವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಲ ಬದಲಾದಂತೆ ಮಕ್ಕಳಿಗೆ ನೀಡುವ ಮಾಹಿತಿಯನ್ನು ಅಂದಿನ ಪರಿಸ್ಥಿತಿಗೆ ತಕ್ಕಂತೆ ಬದಲಿಸಬೇಕು. ಆದರೆ ಅದು ಸತ್ಯ ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವಂತೆ ಇರಬೇಕು. ಅದನ್ನು ಬಿಟ್ಟು ಮಕ್ಕಳಲ್ಲಿ ಅಸಮಾನತೆ, ಸಾಮಾಜಿಕ ಗೊಂದಲ ಸೃಷಿಸುವಂತೆ ಮಾಡಬಾರದು. ಮಕ್ಕಳು ಯಾವುದೇ ಒಂದು ವಿಚಾರವಾದಿಯಾಗಿ ಯೋಚಿಸುವಂತೆ ಮಾಡಬಾರದು. ಬೆಳೆಯುವ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಪ್ರೀಮಿಗಳಾಗಿ, ಸಂವಿಧಾನ ಆಧಾರದ ಮೇಲೆ ಅವರ ಮನಸ್ಥಿತಿ ಬೆಳೆಯಬೇಕು ಅದಕ್ಕೆ ತಕ್ಕಂತೆ ಪಠ್ಯ ಕಾಲ ಕಾಲಕ್ಕೆ ಬದಲಾಯಿಸಬೇಕು ಎಂದು ತಿಳಿಸಿದರು.

ವಯಕ್ತಿಕ ತೇಜೋವಧೆ ನಡೆದಿದೆ:

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ರಾಷ್ಟೀಯ ಪಠ್ಯ ಕ್ರಮ ಮತ್ತು ರಾಜ್ಯ ಪಠ್ಯ ಕ್ರಮ ಚೌಕಟ್ಟು ಇದ್ದು, ಅದನ್ನು ಆಧರಿಸಿ ಪಠ್ಯ ಪರಿಷ್ಕರಣೆ ಆಗಬೇಕು. ಅದಕ್ಕೆ ಅದರದ್ದೇ ಆದ ನೀತಿ ನಿಯಮ ಇದೆ. ಆದರೆ ಇಂದು ನಡೆದಿರುವ ಪರಿಷ್ಕರಣೆ ಯಾವುದನ್ನು ಒಳಗೊಂಡಿಲ್ಲ. ಇಲ್ಲಿ ವಯಕ್ತಿಕ ತೇಜೋವದೆ ಮಾಡುವ ಕೆಲಸ ಮಾಡಿದ್ದಾರೆ. ನಾವು ಮಾಡಿದ್ದಾಗ ಯಾರೂ ಹಿಂದಿನ ಸಮಿತಿಯಗಳ ಕುರಿತು ಮಾತನಾಡಿಲ್ಲ. ನಮ್ಮ ಪಠ್ಯ ಪರಿಷ್ಕರಣಾ ಸಮಿತಿ ಇರುವ ಸತ್ಯವನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.

ಪ್ರೊ. ರಾಜಪ್ಪ ದಳವಾಯಿ, ಡಾ. ನಿರಂಜನಾರಾಧ್ಯ ವಿ. ಪಿ., ಬಿ. ಎಂ. ಹನೀಷ್, ಕೆ. ಆರ್. ಸೌಮ್ಯ, ಜಿ. ಬಿ. ಪಾಟೀಲ್, ಬಿಟಿ ಲಲಿತಾ ನಾಯಕ್ ಮತ್ತಿತರರು ಸಂವಾದದಲ್ಲಿ ಹಾಜರಿದ್ದರು? ಕುಮಾರಸ್ವಾಮಿ ಪ್ರಶ್ನೆ

Edited By : Nagaraj Tulugeri
PublicNext

PublicNext

06/07/2022 07:31 pm

Cinque Terre

26.27 K

Cinque Terre

1

ಸಂಬಂಧಿತ ಸುದ್ದಿ