ಬೆಂಗಳೂರು.ದಿನಾಂಕ 18/04/2022 ಸೋಮವಾರದಿಂದ ಎಸ್ಎಸ್ಎಲ್‌ಸಿ ಪರೀಕ್ಷಾ ಮೌಲ್ಯಮಾಪನ ನಡೆಯಲಿದೆ. ಈಹಿನ್ನೆಲೆ ಪರೀಕ್ಷಾ ಮೌಲ್ಯಮಾಪನ ಸುಲಲಿತವಾಗಿ ನಡೆಯಲು ನಗರ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮೌಲ್ಯಮಾಪನ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಸಿ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಉತ್ತರದಲ್ಲಿ ನಾಲ್ಕು ಮತ್ತು ದಕ್ಷಿಣದಲ್ಲಿ ನಾಲ್ಕು ಒಟ್ಟು 8 ಮೌಲ್ಯಮಾಪನ ಕೇಂದ್ರಗಳಿದ್ದು ಎಲ್ಲಾ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಮಾಡಲು ಸೂಚಿಸಲಾಗಿದೆ. ಅಧಿಕೃತ ವ್ಯಕ್ತಿಗಳಿಗೆ ಬಿಟ್ಟು ಸಾರ್ವಜನಿಕರಿಗೂ ಕೇಂದ್ರದೊಳಗೆ ನಿಷೇಧ ಹೇರಲಾಗಿದೆ. ಇನ್ನೂ ಈ ನಿಷೇಧಾಜ್ಞೆ ಪರೀಕ್ಷಾ ಮೌಲ್ಯಮಾಪನ ಮುಗಿಯುವವರೆಗೂ ಮುಂದುವರಿಸುವುದಾಗಿ ಕಮಿಷನರ್ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
PublicNext
14/04/2022 04:09 pm