ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿಷೇಧವಿದ್ರೂ ಮಾರ್ಕೆಟ್ ನಲ್ಲಿ ಪ್ಲಾಸ್ಟಿಕ್ ಗೇ ಬೇಡಿಕೆ!; ಸರಕಾರಿ ಆದೇಶಕ್ಕಿಲ್ಲ ಬೆಲೆ

ವರದಿ: ಗೀತಾಂಜಲಿ

ಬೆಂಗಳೂರು: ಪ್ಲಾಸ್ಟಿಕ್ ಬಳಸದಂತೆ ಸರ್ಕಾರದ ಆದೇಶವಿದ್ರೂ ಅದನ್ನು ಧಿಕ್ಕರಿಸಿ ಸಣ್ಣಪುಟ್ಟ ಅಂಗಡಿಯಿಂದ ಹಿಡಿದು ದೊಡ್ಡ ಅಂಗಡಿಗಳವರೆಗೂ ಪ್ಲಾಸ್ಟಿಕ್ ಯಥೇಚ್ಛವಾಗಿ ಬಳಸಲಾಗ್ತಿದೆ!

ಪರಿಸರಕ್ಕೆ ಹಾನಿಯಾಗದಂತೆ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿತ್ತು. ಹೀಗಾಗಿ ಜುಲೈ 1ರಿಂದಲ್ಲೇ ಪ್ಲಾಸ್ಟಿಕ್ ನಿಷೇಧಿಸಬೇಕೆಂದು ಆದೇಶಿಸಲಾಗಿತ್ತು. ಆದ್ರೆ, ಈಗ ನಗರದ ಕೆಆರ್ ಮಾರ್ಕೆಟ್ , ವಸಂತನಗರ ಸೇರಿದಂತೆ ಹಲವು ಕಡೆ ಪ್ಲಾಸ್ಟಿಕ್ ಬಳಸಲಾಗ್ತಿದೆ. ಅಂಗಡಿಗಳಿಂದ ಎಲ್ಲ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಿಂದಲೇ ಜನರು ತೆಗೆದುಕೊಂಡು ಹೋಗ್ತಿದ್ದಾರೆ.

ಸಣ್ಣಪುಟ್ಟ ಅಂಗಡಿ ಸೇರಿದಂತೆ ಬೇಕರಿ, ದಿನಸಿ ಹೀಗೆ ಎಲ್ಲ ಕಡೆಯೂ ಪ್ಲಾಸ್ಟಿಕ್ ಚೀಲ, ಕವರ್ ರಾರಾಜಿಸುತ್ತಿದೆ. ಕೆಲವೊಂದು ಭಾಗಗಳಲ್ಲಿ ಸ್ವತಃ ಮಾರ್ಷಲ್ ಗಳು ಫೀಲ್ಡ್ ಗಿಳಿದು ಪರಿಶೀಲನೆ ಮಾಡಿದಾಗ ಪ್ಲಾಸ್ಟಿಕ್ ಯಥೇಚ್ಛವಾಗಿ ಸಿಕ್ಕಿದೆ. ಅದ‌ನ್ನು ವಶಪಡಿಸಿ ದಂಡ ಹಾಕಲು ಮುಂದಾಗಿದ್ದಾರೆ. ಕೆಲವು ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ನಲ್ಲೇ ಪಾರ್ಸೆಲ್ ಮಾಡಿಕೊಡ್ತಾರೆ.

ಅಂಗಡಿಗಳಲ್ಲಿ ಮಾರಾಟಗಾರರನ್ನು ಪ್ಲಾಸ್ಟಿಕ್ ನಿಷೇಧವಿದ್ರೂ ಯಾಕೆ ಉಪಯೋಗಿಸ್ತೀರಾ ಅಂತಾ ಕೇಳಿದ್ರೆ, ಜನರಿಗೆ ಯಾವುದರಲ್ಲಿ ಹಾಕಿ ಕೊಡೋಣ ಅಂತಾರೆ. ಇನ್ನು, ಪ್ಲಾಸ್ಟಿಕ್ ಕವರ್ ಬದಲಿಗೆ ಬಟ್ಟೆ ಬ್ಯಾಗ್ ಗಳಲ್ಲಿ ಕೆಲವು ಪದಾರ್ಥ ಹಾಕಿಕೊಡ್ತಾರೆ. ಆದ್ರೆ, ಪ್ಲಾಸ್ಟಿಕ್ ಗಿಂತ ಬಟ್ಟೆ ಕವರ್ ಬೆಲೆ ಜಾಸ್ತಿ. ಹೀಗಾಗಿ ಜನರು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡ್ತಾರೆ. ಇನ್ನು 10 ಕೆಜಿ ಮೇಲ್ಪಟ್ಟ ಐಟಂ ತಗೊಂಡ್ರೆ ಪ್ಲಾಸ್ಟಿಕ್ ಕವರ್ ಕೊಡಲೇಬೇಕು. ಇಲ್ಲವಾದರೆ ಜನರು ಗಲಾಟೆ ಮಾಡ್ತಾರೆ ಅಂತಾ ಅಂಗಡಿಯವರು ಪ್ರತಿಕ್ರಿಯಿಸುತ್ತಾರೆ.

Edited By : Manjunath H D
PublicNext

PublicNext

26/07/2022 04:10 pm

Cinque Terre

32.37 K

Cinque Terre

1

ಸಂಬಂಧಿತ ಸುದ್ದಿ