ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಮಿಸ್ಟರ್ ಇಂಡಿಯಾ" ಕಿರೀಟ ಧರಿಸಿದರೂ ಆಧರಿಸದ ಸರಕಾರ!; ಬಾಡಿ ಬಿಲ್ಡರ್ ಚೇತನ್‌ ಬೇಸರ

ಬೆಂಗಳೂರು: ಬೆಂಗಳೂರಿನ ಗೋಣಿಪುರ ಗ್ರಾಮದ ಚೇತನ್, ಬಾಡಿ ಬಿಲ್ಡಿಂಗ್ ನಲ್ಲಿ "ಮಿಸ್ಟರ್ ಕರ್ನಾಟಕ" ಹಾಗೂ "ಮಿಸ್ಟರ್ ಇಂಡಿಯಾ" ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರರಾದವರು.

2013- 14ರ ಸಾಲಿನ ದೇಹದಾರ್ಢ್ಯ ಸ್ಪರ್ಧೆಯಲ್ಲಿ "ಮಿಸ್ಟರ್ ಇಂಡಿಯಾ" ಆಗಿ ಮೂಡಿ ಬಂದ ಚೇತನ್‌, "ಪಬ್ಲಿಕ್‌ ನೆಕ್ಸ್ಟ್‌" ಜತೆ ಮಾತನಾಡಿದರು. "ಬಾಡಿ ಬಿಲ್ಡಿಂಗ್‌ ನಲ್ಲಿ ನಾವು ಭಾರತವನ್ನು ಹಾಗೂ ರಾಜ್ಯವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ರೂ ಸಹ ನಮ್ಮನ್ನು ಸರ್ಕಾರ ಗುರುತಿಸಿ, ಸೂಕ್ತ ಉದ್ಯೋಗ ನೀಡಿ ಪ್ರೋತ್ಸಾಹಿಸುವುದು ಬಲು ಅಪರೂಪ.

ಈ ನೋವು ಪ್ರತಿ ಬಾಡಿ ಬಿಲ್ಡರ್ ಅನ್ನು ಕಾಡುತ್ತಿದೆ. ದಯವಿಟ್ಟು, ರಾಜ್ಯ ಸರ್ಕಾರ ನಮ್ಮಂತಹ ದೇಹದಾರ್ಢ್ಯ ಪಟುಗಳತ್ತ ಚಿತ್ತ ಹರಿಸಬೇಕು" ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕಳಕಳಿಯಿಂದ ಮನವಿ ಮಾಡಿಕೊಂಡರು.

ಈಗ ಜಿಮ್ ಕೋಚ್ ಆಗಿ ದುಡಿಯುತ್ತಿರುವ ಚೇತನ್‌, ಯುವ ದೇಹದಾರ್ಢ್ಯ ಪಟುಗಳನ್ನು ಪ್ರೋತಾಹಿಸುತ್ತಾ ಅವರಿಗೆ ಸೂಕ್ತ‌ ತರಬೇತಿ ನೀಡುವ ಕಾಯಕ ನಿರತರಾಗಿದ್ದಾರೆ.

Edited By : Somashekar
PublicNext

PublicNext

23/08/2022 12:03 pm

Cinque Terre

23.7 K

Cinque Terre

1

ಸಂಬಂಧಿತ ಸುದ್ದಿ