ಕೇಂದ್ರ ಸರ್ಕಾರದ ಅಗ್ನಿಫತ್ ಬಗ್ಗೆ ಭಾರತದಲ್ಲಿ ಕೆಲವರಿಂದ ಮಾತ್ರ ಅಪಸ್ವರ ಕೇಳಿ ಬರ್ತಿದೆ. ಇಂತಹ ಸಂಧರ್ಭದಲ್ಲಿ ದೇಶದಾದ್ಯಂತ ಅಗ್ನಿಪತ್ ಯೋಜನೆಗೆ ಭಾರಿ ಬೆಂಬಲ ವ್ಯಕ್ತವಾಗ್ತಿದೆ. ಪ್ರಸ್ತುತ ಕೋಲಾರದಲ್ಲಿ 182ಜನ ಯುವಕರಿಗೆ ಉಚಿತ ತರಭೇತಿ ನೀಡಲಾಗ್ತಿದೆ.
ಈ ತರಭೇತಿ ಸ್ಥಳಕ್ಕೆ ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ ಭೇಟಿ ನೀಡಿ ಅಗ್ನಿಪತ್ ಯೋಜನೆ ಬಗ್ಗೆ ತಿಳುವಳಿಕೆ ನೀಡಿದರು.
ಗ್ರಾಮಾಂತರ ಪ್ರದೇಶಗಳಿಂದ ಬರುವ ಯುವಕರಿಗೆ ಪ್ರೋತ್ಸಾಹ ನೀಡಲಾಗ್ತಿದೆ. ಎಲ್ಲಾ ತರಭೇತಿದಾರರು ಉಳಿದುಕೊಳ್ಳಲು ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮುನಿಸ್ವಾಮಿಯವರೇ ಮಾಡಲಿದ್ದಾರೆ. ಕೋಲಾರದಲ್ಲಿ ಸೇನಾಕಾಂಕ್ಷಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ತರಭೇತಿಯ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ದೈಹಿಕ ಹಾಗೂ ಪಠ್ಯ ತರಭೇತಿಯನ್ನು ನೀಡಲಾಗುವುದು.
ಕೋಲಾರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯಿಂದ ಉಚಿತ ತರಭೇತಿ ನೀಡುವುದರ ಜೊತೆಗೆ ತರಭೇತಿ ಪಡೆಯುವವರಿಗೆ ಉಚಿತವಾಗಿ ಮೊಟ್ಟೆ, ಹಾಲು, ಬಾಳೆಹಣ್ಣು ಹಾಗೂ ಮೊಳಕೆಕಾಳು ವ್ಯವಸ್ಥೆ ಮಾಡಲಾಗುವುದು. ಮಾಜಿ ಸೈನಿಕ ಕೃಷ್ಣಮೂರ್ತಿ ಹಾಗೂ ಬ್ಲಾಕ್ ಕಮಾಂಡೋ ತರಭೇತಿ ಪಡೆದಿರುವವರ ಮಾರ್ಗದರ್ಶನದಲ್ಲಿ ತರಭೇತಿ ನಡೆಯುತ್ತದೆ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
Kshetra Samachara
09/07/2022 11:12 pm