ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಲ್ಲಿ ಫುಟ್ ಪಾತ್ ತ್ಯಾಜ್ಯದ ಆಗರ!; ಸಂಚಾರ ದುಸ್ತರ

ಬೆಂಗಳೂರು: ಒಂದು ಕಡೆ ಫುಟ್ ಪಾತ್... ಅದರ ಮೇಲೆ ಇರುವ ಗಲೀಜು. ರಸ್ತೆಯಲ್ಲಿ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುತ್ತಿರುವ ಪೋಷಕರು. ಪಕ್ಕದಲ್ಲೇ ಬಾಗಿರುವ ಕಂಬಗಳು... ಅಲ್ಲೇ ನೇತಾಡುತ್ತಿರುವ ಕೇಬಲ್ ಗಳು. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ಬಳಿ.

ಹೌದು... ಬೆಂಗಳೂರಿನಲ್ಲಿ ಎಷ್ಟೋ ಕಡೆ ಫುಟ್ ಪಾತ್ ಇರಲ್ಲ.‌ ಅಂತದ್ರಲ್ಲಿ ಇಲ್ಲಿ ಇಷ್ಟು ದೊಡ್ಡದಾದ ಫುಟ್ ಪಾತ್ ಗಳಿದ್ರೂ ಹಿರಿ-ಕಿರಿಯರು ಓಡಾಡೋದಕ್ಕೆ ಆಗುತ್ತಿಲ್ಲ. ಮರಗಳನ್ನು ಕಡಿದು ಕೊಂಬೆಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ವಯರ್ ಗಳು ನೇತಾಡುತ್ತಿದೆ. ಮಳೆ ಬಂದಾಗ ಬಿದ್ದ ಮರವೂ ಸಹ ತೆರವುಗೊಂಡಿಲ್ಲ!

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಷ್ಟು ದೊಡ್ಡದಾದ ಫುಟ್‌ ಪಾತ್ ಗಳು ಉಪಯೋಗಕ್ಕೆ ಬಾರದಿರುವುದು ವಿಪರ್ಯಾಸವೇ ಸರಿ. ಮನೆ ಕಸವನ್ನೂ ಫುಟ್‌ ಪಾತ್ ಮೇಲೆ ಹಾಕುತ್ತಾರೆ. ಬೇಡವಾದ ವಸ್ತುಗಳನ್ನೆಲ್ಲ ಇಲ್ಲಿ ಎಸೆದು ಹೋಗಿದ್ದಾರೆ. ಇದೆಲ್ಲವೂ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ವರದಿ ಮಾಡಲೆಂದು ಹೋದಾಗ ಅಲ್ಲಿನ ಶಾಲಾ‌ ಮಕ್ಕಳು, ಪೋಷಕರು ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದರು.

ಇಲ್ಲಿ ಹಲವಾರು ಶಾಲಾ- ಕಾಲೇಜುಗಳು ಇವೆ. ಹೀಗಾಗಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ಮಕ್ಕಳು ಸಂಚರಿಸಲು ನಿತ್ಯವೂ ಸಂಕಷ್ಟ ಎದುರಿಸುತ್ತಿದ್ದಾರೆ. ಮಾಧ್ಯಮಗಳು ವರದಿ ಮಾಡಿದ ನಂತರವೇ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಯಾಕೆ‌ ಮೊದಲೇ ಜಾಗೃತರಾಗಿ ಕೆಲಸ ಮಾಡೋದಿಲ್ಲ!? ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ.

Edited By : Shivu K
PublicNext

PublicNext

20/08/2022 10:08 am

Cinque Terre

29.83 K

Cinque Terre

0

ಸಂಬಂಧಿತ ಸುದ್ದಿ